ಹಂಪಯ್ಯ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಮಲ್ಲಿಕಾರ್ಜುನ್ ಗೌಡ ಒತ್ತಾಯ

ಕವಿತಾಳ:- ಮಾನ್ವಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಹಂಪಯ್ಯ ನಾಯಕ್ ಸಹುಕಾರ  ಅವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ .
ಕಾಂಗ್ರೆಸ್ ಯುವ ಮುಖಂಡರು ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ್ ಗೌಡ ಒತ್ತಾಯಿಸಿದರು.

promotions

 2008 2013ರ  ವಿಧಾನಸಭಾ ಚುನಾವಣೆಗಳಲ್ಲಿ  ಸತತವಾಗಿ ಎರಡನೇ ಬಾರಿ ಗೆಲುವು ಹಾಗೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಆಯ್ಕೆಯಾಗಿರುವ ಮೂಲಕ  ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

promotions

 ಸ್ಥಳೀಯವಾಗಿ ಹಿರಿಯ ಶಾಸಕರಾಗಿರುವ ಹಂಪಯ್ಯ ನಾಯಕ  ಅವರು ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನೀರಾವರಿ ಸೇರಿದಂತೆ ಸದನದಲ್ಲಿ ಈ ಭಾಗದ ಜನರಿಗೆ ನ್ಯಾಯವಾದಿಸಲು ಬದ್ಧರಾಗಿದ್ದಾರೆ.

 ಈ ರಾಯಚೂರು ಭಾಗದಲ್ಲಿ  ಒಮ್ಮೆ ಕೂಡ  ಸ್ಥಳೀಯರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅನ್ಯ ಜಿಲ್ಲೆಯವರಿಗೆ ಆದ್ಯತೆ  ನೀಡಲಾಗಿದೆ ಈ ಬಾರಿಯಾದರೂ ನಮ್ಮ ಕ್ಷೇತ್ರಕ್ಕೆ ಸ್ಥಳೀಯವಾಗಿ  ಕಾಂಗ್ರೆಸ್ ಹಿರಿಯ ಶಾಸಕರಾಗಿರುವ ಹಂಪಯ್ಯ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು ಅವರು ಸ್ಥಳೀಯವಾಗಿ ಪ್ರಭಾವಿ ಶಾಸಕರಾಗಿದ್ದು ಈ ಭಾಗದಲ್ಲಿ ಸಚಿವ ಸ್ಥಾನ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯದ ಹಿರಿಯ ನಾಯಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದರು.

Read More Articles