ಮಲ್ಲೋಳಿ ಗ್ರಾಮದ ಹತ್ಯೆ ಪ್ರಕರಣ; ಸಂತ್ರಸ್ತರ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ-ಸಾಂತ್ವಾನ
- 14 Jan 2024 , 9:33 PM
- Belagavi
- 136
ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಮಲ್ಲೋಳಿ ಗ್ರಾಮದಲ್ಲಿ ಅ.20 ರಂದು ನಡೆದ ಒಂದೇ ಕುಟುಂಬದ ಮೂವರ ಹತ್ಯೆ ಮಾಡಲಾಗಿತ್ತು. ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

ನಂತರ ಮಲ್ಲೋಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲೋಳಿ ಗ್ರಾಮದಲ್ಲಿಅ.20 ರಂದು ಒಂದೇ ಕುಟುಂಬದ ಮೂವರ ಹತ್ಯೆ ನಡೆದಿದ್ದು, ಪಾಲಕರನ್ನು ಕಳೆದುಕೊಂಡ ಮಗು ಅನಾಥವಾಗಿದ್ದು, ಆ ಹೆಣ್ಣು ಮಗುವಿನ ಸಂಪೂರ್ಣ ವಿದ್ಯಾಭ್ಯಾಸ ಖರ್ಚನ್ನು ನಾನೇ ಭರಿಸುರತ್ತೇನೆ ಎಂದು ತಿಳಿಸಿದರು.

ಗ್ರಾಮದಲ್ಲಿ ಶಾಂತಿ, ಸುವ್ಯಸ್ಥೆ ಕಾಪಾಡಬೇಕು. ಅಹಿತಕರ ಘಟನೆಗಳು ನಡೆಯಲು ಸರ್ವ ಗ್ರಾಮಸ್ಥರು ಅವಕಾಶ ಕಲ್ಪಿಸಬಾದರು. ಕಾನೂನು ಸುವ್ಯಸ್ಥೆ ಹದಗೆಡದಂತೆ ಪೊಲೀಸರು ನೀಗಾ ವಹಿಸಬೇಕೆಂದು ಇದೇ ವೇಳೆ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಲ್ಲೋಳಿ ಗ್ರಾಮದ ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು ಇದ್ದರು.










