ಬಲಿ ಪಡೆದ ರೋಡ ಬ್ರೇಕ: ಆಕ್ರೋಶ ವ್ಯಕ್ತ ಪಡಿಸಿದ ಸ್ಥಳೀಯರು
- Krishna Shinde
- 14 Jan 2024 , 9:45 AM
- Belagavi
- 161
ಬೆಳಗಾವಿ : ಮಹಾಂತೇಶ ನಗರದ ಹತ್ತಿರ ಅವೈಜ್ಞಾನಿಕವಾಗಿ ರೋಡ ಬ್ರೇಕ್ ನಿರ್ಮಿಸಲಾಗಿದ್ದು ಅನೇಕ ಅಪಘಾತಗಳನ್ನುಂಟು ಮಾಡುತ್ತಿದೆ.

ರೋಡ ಬ್ರೇಕನಿಂದ ಸ್ಥಳೀಯ ಯುವಕ ಜೀವ ಕಳೆದು ಕೊಂಡಿದ್ದು ಸ್ಥಳೀಯ ನಾಯಕರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಯುವಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸ್ಥಳದಲ್ಲಿ ಸ್ಮಾರ್ಟ ಸಿಟಿ ಅಳವಡಿಸಿದ ಲೈಟ್ ಕೂಡಾ ಬಂದ ಇದ್ದು ಕತ್ತಲಲ್ಲಿ ಜನ ತಿರುಗಾಡುವಂತಾಗಿದೆ ಮತ್ತು ರೋಡ್ ಬ್ರೇಕ
ಮೇಲೆ ಬಿಳಿ ಸೈನ್ ಪಟ್ಟಿ ಕೂಡ ಅಳವಡಿಸದ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ.
ಇವತ್ತು ಮತ್ತೊಂದು ಅಪಘಾತ ನಡೆದಿದ್ದು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಓರ್ವ ಪಾರಾಗಿದ್ದಾರೆ,ಸ್ವಯಂ ಮುಂದಾಳಿತ ವಹಿಸಿ ರೋಡ್ ಬ್ರೇಕನ್ನು ಸ್ಥಳೀಯರು ಕಿತ್ತು ಹಾಕಲು ಮುಂದಾಗಿದ್ದಾರೆ.










