ರೈತರ ಹತ್ತು ಹಲವು ಸಮಸ್ಯೆ; ಚಳಿಗಾಲದ ಅಧಿವೇಶನ ವೇಳೆ ಹೋರಾಟ: ಕೋಡಿಹಳ್ಳಿ ಎಚ್ಚರಿಕೆ
- 15 Jan 2024 , 2:47 AM
- Belagavi
- 202
ಅಥಣಿ: ರಾಜ್ಯದ ರೈತರ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಸರಕಾರ ತಕ್ಷಣ ಪರಿಹಾರ ನೀಡದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಹೋರಾಟದ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಅವರು ಅಥಣಿ ತಾಲೂಕಿಗೆ ಭೇಟಿ ನೀಡಿದ ವೇಳೆ ಮಾಧ್ಯಮ ಜತೆ ಮಾತನಾಡಿದರು.

ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕುರಿತು ರೈತರ ಜತೆ ತುರ್ತು ಸಭೆಯನ್ನು ನಡೆಸಿದರು. ರಾಜ್ಯ ಸರ್ಕಾರವು ರೈತರ ಜೊತೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ರೈತರ ಗೋಳು ಕೇಳುತ್ತಿಲ್ಲ. ರೈತ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ದೊರಕುತ್ತಿಲ್ಲ. ಕೇಂದ್ರ ಸರ್ಕಾರ ಒಂದು ಬೆಲೆಯನ್ನು ಘೋಷಿಸಿದರೆ ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿಗದಿತ ಬೆಲೆಯನ್ನು ಘೋಷಣೆ ಮಾಡದೆ ಪ್ರಾರಂಭಿಸಿದ್ದು ರೈತರಿಗೆ ಮಾಡಿದ ಬಹುದೊಡ್ಡ ಅನ್ಯಾಯ ಆಗಿದೆ. ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ.
ಈ ಪೂರ್ವ ಭಾಗದ ಬಸವೇಶ್ವರ ಏತ ನೀರಾವರಿ ಇನ್ನೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಈ ಕುರಿತು ಸಹ ಧ್ವನಿ ಎತ್ತಲಾಗುವುದು 2019ರಲ್ಲಿ ಬಂದ ಪ್ರವಾಹದಲ್ಲಿ ರೈತರ ನೂರಾರು ಎಕರೆ ಬೆಳೆ ನಾಶವಾದರೂ ಸಹ ಇದರ ಪರಿಹಾರ ಇನ್ನು ದೊರೆತಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಶೀಘ್ರವಾಗಿ ಉತ್ತರ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕು ಇಲ್ಲವಾದರೆ ಸರ್ಕಾರದ ವಿರುದ್ಧ ಈ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಗಮಿಸಿದ ನೂರಾರು ತಾಲೂಕ ಅಧ್ಯಕ್ಷರು ಕೂಡಿಹಳ್ಳಿ ಚಂದ್ರಶೇಖರ್ ಜೊತೆ ಸ್ಥಳೀಯ ಚರ್ಚೆಗಳ ನಡೆಸಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಮುದಾಯ ಭಾಗವಹಿಸುತ್ತೇವೆ ಎಂದು ಹೇಳಿದರು.
ತಾಲೂಕಾಧ್ಯಕ್ಷರಾದ ಮಹದೇವ್ ಮಡಿವಾಳ, ರಾಜ್ಯದ ಗೌರವಧ್ಯಕ್ಷರಾದ ರಮೇಶ್ ಮಡಿವಾಳ್, ಹನುಮಂತ ಕಟ್ಟಿನಾಯಕ್, ಸೂರ್ಯಕಾಂತ್ ನಾವಿ ಹಾಗೂ ವಿವಿಧಗಳಿಂದ ಆಗಮಿಸಿದ ಜಿಲ್ಲಾಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










