ಸ್ವಾತಂತ್ರ್ಯ ದಿನಾಚರಣೆಯಂದೇ ಪುಂಡಾಟಿಕೆ ಮೆರೆದ ಮರಾಠಿ ಪುಂಡರು

ಬೆಳಗಾವಿ:  ಜಿಲ್ಲೆಯ ನಿಪ್ಪಾಣಿಯ ನಗರಸಭೆಯಲ್ಲಿ ಧ್ವಜಾರೋಹಣ ನಂತರ ನಗರಸಭಾ ಸದಸ್ಯರು ಭಗವಾ ಧ್ವಜ ಹಾರಿಸಲು ಮುಂದಾಗಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.

promotions

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರಿಂದ ದ್ವಜಾರೋಹಣದ ಬಳಿಕ ನಡೆದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ ಮತ್ತು ಹೊಸ ಭಗವಾ ಧ್ವಜ ಹಾರಿಸುವ ಯತ್ನಕ್ಕೆ ನಿಪ್ಪಾಣಿ ಪೊಲೀಸರು ತಡೆ ಹಿಡಿದ್ದಾರೆ ಎಂದು ತಿಳಿದು ಬಂದಿದೆ.

promotions

ಈಗಾಗಲೇ ನಗರಸಭೆ ಮೇಲೆ‌ ಭಗವಾ ಧ್ವಜ ಹರಡುತ್ತಿದ್ದು  ತ್ರಿವರ್ಣ ಧ್ವಜ‌ ಅಳವಡಿಸುವಾಗ ಹಳೆಯ ಭಗವಾ ಧ್ವಜ ಬದಲಿಸಿ ಹೊಸ ಭಗವಾ ಧ್ವಜ ಹಾಕಲು‌ ಸದಸ್ಯರು ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಧ್ವಜ ಹಾರಿಸಲು ಬಂದವರನ್ನು ತಡೆದು ತರಾಟೆಗೆ ತೆಗೆದುಕೊಂಡ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ,ಕೆಲ‌ ಹೊತ್ತಿನ‌ ನಂತರ ಹಳೆಯ ಭಗವಾ ಧ್ವಜವನ್ನೇ ಮುಂದುವರೆಸುವ ನಿರ್ಧಾರ ನಡೆದಿದೆ ಆದರೆ  ಕನ್ನಡ ನೆಲದಲ್ಲಿ ಮರಾಠಿ ಪುಂಡರ ಅಟ್ಟಹಾಸ ಮುಂದುವರೆದರು ಸರಕಾರ ಕಣ್ಮುಚ್ಚಿ ಕುಳಿತಿದೆ.

Read More Articles