ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್: ಕೊಲ್ಲಾಪುರ ಡಿಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ

ಬೆಳಗಾವಿ :ಎಂ ಇ ಎಸ್ ಪುಂಡರು ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದಲ್ಲಿ ನಾಡದ್ರೋಹಿ ಘೋಷಣೆ ಮಾಡಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.

promotions

ರಹೆಂಗೆ ತೋ ಮಹಾರಾಷ್ಟ್ರ ಮೇ.. ನಹೀ ತೋ ಜೇಲ್ ಮೇ ಎಂದು ಘೋಷಣೆ ಕೂಗಿ ಶಾಂತಿ ಕದಡುವ ಕೆಲಸ ಮಾಡುತಿದ್ದಾರೆ.

promotions

ಬೆಳಗಾವಿ, ಕಾರವಾರ, ನಿಪ್ಪಾಣಿ ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದ್ ಪುಂಡರು ಮಹಾಮೇಳಾವ್‌ಗೆ ಬ್ರೇಕ್ ಬೆನ್ನಲ್ಲೇ ನಾಡದ್ರೋಹಿ ಎಂಇಎಸ್ ಹೊಸ ವರಸೆ ಶುರು ಮಾಡಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇಂದು ಪ್ರತಿಭಟನೆ ನಡೆಸಲು ನಿರ್ಧಾರ 
ಬೆಳಗಾವಿಯ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಜಮಾವಣೆಗೊಂಡ ಎಂಇಎಸ್ ಮುಖಂಡರು ಪ್ರಕಾಶ್ ಮರಗಾಳಿ, ಮಾಲೋಜಿ ಅಷ್ಟಗಿ
ಎಂಇಎಸ್ ಕಾರ್ಪೊರೇಟರ್ ರವಿ ಸಾಳುಂಕೆ ಸೇರಿ 20ಕ್ಕೂ ಹೆಚ್ಚು ಭಾಗಿ ಯಾಗಿದ್ದರು.
ಬೆಳಗಾವಿಯಿಂದ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಗೆ ತೆರಳಲಿರುವ ಎಂಇಎಸ್ ಪುಂಡರು ಕೊಗನೊಳ್ಳಿಯಿಂದ ಮಹಾರಾಷ್ಟ್ರದ ಕೊಲ್ಲಾಪುರ ಡಿಸಿ ಕಚೇರಿಯವರೆಗೆ ಬೈಕ್ ‌ರ್ಯಾಲಿ ಮಾಡಲು  ನಿರ್ಧಾರ ಮಾಡಿದ್ದಾರೆ.
ಎಂಇಎಸ್‌ಗೆ ಸಾಥ್ ನೀಡಲಿರುವ ಮಹಾವಿಕಾಸ್ ಆಘಾಡಿ ಮೈತ್ರಿಕೂಟದ ಮಿತ್ರಪಕ್ಷಗಳು ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ.

Read More Articles