ಬೆಳಗಾವಿಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು
- krishna shinde
- 14 Jan 2024 , 9:55 PM
- Belagavi
- 555
ಬೆಳಗಾವಿ: 2023ರ ಡಿಸೆಂಬರ್ ಚಳಿಗಾಲ ಅಧಿವೇಶನ ಹುಮ್ಮಸ್ಸಿನ ಮದ್ಯೆ ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಸಂಯುಕ್ತ ಮಹಾರಾಷ್ಟ್ರ ಆಗಬೇಕೆಂದು ಘೋಷಣೆ ಕೂಗಿದ್ದಾರೆ. ಅಲ್ಲದೆ, "ಬೆಳಗಾವಿ ನಮ್ಮ ಹಕ್ಕು " ಎಂದು ಕೂಗಿದ್ದಾರೆ.











