ಕ್ರೀಡಾ ಪ್ರೇಮಿಗಳಿಗೆ ಹೊಸ ಹುರುಪು ನೀಡುವ ಉದ್ದೇಶ : ಸಚಿವ ಸತೀಶ ಜಾರಕಿಹೊಳಿ
- shivaraj bandigi
- 10 Feb 2024 , 11:53 PM
- Belagavi
- 449
ಗೋಕಾಕ : ಕಳೆದ 20-30 ವರ್ಷಗಳ ಕನಸು ಪಟ್ಟಣದ ವಾಲ್ಮೀಕಿ ಕ್ರೀಡಾಂಗಣದಲ್ಲಿ ರಾತ್ರಿ ಪಂದ್ಯಗಳನ ನಡೆಸಿ ಕ್ರೀಡಾ ಪ್ರೇಮಿಗಳಿಗೆ ಹೊಸ ಹುರುಪ ನೀಡುವ ಉದ್ದೇಶ ಇತ್ತು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಗೋಕಾಕ ಪಟ್ಡಣದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಪಂದ್ಯದಲ್ಲಿ ಅವರು ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿ, ನನಗೆ ಕನಸು ಇತ್ತು ನಮ್ಮ ಶಹರದ ಯುವ ಕ್ರೀಡಾ ಪಟುಗಳಿಗೆ ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಮಾಡಿ ಪಂದ್ಯಗಳನ್ನು ಆಡಿಸಬೇಕೆಂದು ಅದು ಇಂದು ನನಸಾಗಿದೆ ಎಂದರು.

ನೀವು ಕ್ರಿಕೆಟ್ ಆಟ ಅಡುತ್ತೀರಿ ಎಂದು ಪತ್ರಕರ್ತರ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು ನನಗೂ ಕೂಡಾ ಕ್ರಿಕೆಟ್ ಆಡಬೇಕೆಂದು ಆಸೆ ಇದೆ ಆದರೆ ಸಮಯದ ಅಭಾವ ಎದುರಾಗುತ್ತಿದೆ ಎಂದರಲ್ಲದೆ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ತೋರಲು ಸಕಲ ವ್ಯವಸ್ಥೆ ಕಲ್ಪಿಸಲಾಗುವದೆಂದರು.










