ಜನರ ಜೊತೆ ಬೆರೆತು ಅವರ ಸಮಸ್ಯೆ ಆಲಿಸಬೇಕು : ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ : ಚಿಕ್ಕೋಡಿಗೆ ಜನ ಬಂದಿಲ್ಲ ಕೆಲಸ ಮಾಡಿಲ್ಲ ಎಂದು ಎನಬಾರದು, ಜನರೊಂದಿಗೆ ಬೆರೆತು ಅವರ ಸಮಸ್ಯೆ ಆಲಿಸಬೇಕೆಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. .

promotions

ಅವರು ಇಂದು ಬೆಳಗಾವಿಯಲ್ಲಿ, ತಾವು ಚಿಕ್ಕೋಡಿಯಲ್ಲಿ ಆಕ್ಟಿವ್ ಆಗಿರುವ ವಿಚಾರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ನೂರಕ್ಕೆ ನೂರು ಸರ್ಕಾರಿ ಕೆಲಸ‌ ಮಾಡಲು ಆಗಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಡೆಯುತ್ತಿದೆ. ರಾಯಭಾಗ ಕುಡಚಿ ಸೇರಿದಂತೆ ಎಲ್ಲ ಕಡೆ ಓಡಾತ ನಡೆಸಿದ್ದೇವೆ ಎಂದರು. 

promotions

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು, ಪಾರ್ಟಿ ವೇದಿಕೆಯಲ್ಲಿ ಹೈಕಮಾಂಡ್ ಜೊತೆ ಚರ್ಚೆ ಆಗಬೇಕು. ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ ಹೈಕಮಾಂಡ್ ನಿರ್ಣಯ ಮಾಡಬೇಕು ಆದರೆ ಆ ವಿಚಾರ ಸಧ್ಯ ನಮ್ಮ ಮುಂದೆ ಇಲ್ಲ ಎಂದರು. 

ಕೆಪಿಸಿಸಿ ಅಧ್ಯಕ್ಷ ಸ್ಥಾನ‌ ಕೊಟ್ಟರೆ ನಿಭಾಯಿಸ್ತಿರಾ ಎಂಬ ಪ್ರಶ್ನೆಗೆ, ಸಧ್ಯ ಯಾವುದೇ ಚುನಾವಣೆಗಳು ಇಲ್ಲ ಮತಗಳನ್ನು ತಂದು ಕೊಡುವವರು ಅಧ್ಯಕ್ಷರಾಗಬೇಕು. ಅಂತಹ ಯಾವುದೇ ಚರ್ಚೆ ಆಗಿಲ್ಲ‌ ದೆಹಲಿ ಭೇಟಿ ವಿಚಾರ ‌ಬೇರೆ ಇದೆ , ಬೇರೆ ಬೇರೆ ಕೆಲಸಗಳಿಗೆ ನಾವು ಭೇಟಿ ಆಗಿದ್ದೇವೆ ಎಂದರು. 

ಪ್ರಧಾನಿಗೆ ಸಿಎಂ ಅವರು ಭೇಟಿ ಆಗಲು ಹೋದಾಗ ರಾಜಕೀಯ ಚರ್ಚೆ ಆಗಿರುತ್ತದೆ. ಒಳಗೆ ಯಾರು ಏನು ಹೇಳಿದರು ಎಂದು ಅವರಿಗೆ ಮಾತ್ರ ಗೊತ್ತಿರುತ್ತೆ. ಪ್ಲಾನಿಂಗ್ ಎನೂ ಇಲ್ಲ ನೆಗೆಟಿವ್ ಇದ್ದಿದ್ದನ್ನು ಪಾಸಿಟಿವ್ ಮಾಡಬೇಕು ಅದು ಕೂಡಾ ಒಂದು ಕಲೆ ಎಂದರು. ಸುಮ್ಮನೆ ನಾವು ಡೇಲಿ ಇಡೀ ರಾಜ್ಯದ ತುಂಬ ಡಿಸಿಎಂ ಚರ್ಚೆ‌ಮಾಡುವ ಬದಲು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು ಎಂದರಲ್ಲದೆ ಸಿಎಂ‌‌ ಸ್ಥಾನವನ್ನು ಬಿಟ್ಟು ಕೊಡಬೇಕು ಎಂದು ಸ್ವಾಮೀಜಿ ಹೇಳಿಕೆ ‌ವಿಚಾರ ಕುರಿತು ಮಾತನಾಡಿ, ಮುರುಗೇಶ‌ ನಿರಾಣಿಯನ್ನು ಮಂತ್ರಿ ಮಾಡಿ ಎಂದು ಸ್ವಾಮೀಜಿಯೊಬ್ಬರು ಯಡಿಯೂರಪ್ಪಗೆ ಹೇಳಿದ್ದರು ಏನಾಯಿತು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಡಿಸಿಎಂ ಹುದ್ದೆ‌ ಮಾಡುವ ಬಗ್ಗೆ ಚರ್ಚೆ ಆಗ್ತಿರೋ ವಿಚಾರ, ಮಾಡ್ತಿವಿ ಅಂದ್ರೆ ಮಾಡ್ತಿವಿ ಅಂತ ಹೇಳಬೇಕು ಇಲ್ಲವಾದ್ರೆ ಇಲ್ಲ ಅಂತ ಹೇಳಬೇಕು ಎಂದರು. 

ಸತೀಶ ಜಾರಕಿಹೊಳಿ ಸಿಎಂ ಆಗುವ ಕನಸು ಈಡೇರೋದು ಯಾವಾಗ ಎಂಬ ಪ್ರಶ್ನೆಗೆ, ಕಾಯಬೇಕು ರಾಜಕೀಯದಲ್ಲಿ ಕಾಯೋದೆ ಒಂದು ದೊಡ್ಡ ಸಾಧನೆ ಎಂದರು. 

ನಿಗಮ ಮಂಡಳಿ ಅದ್ಯಕ್ಷ ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ಹಂಚದ ವಿಚಾರ, ಇನ್ನು ಕೆಲ ಸ್ಥಾನಗಳಿಗೆ ಹಂಚಿಕೆ ಆಗಬೇಕು ನಾವು ಸಿಎಂ ಅವರಿಗೆ 

ನಮ್ಮ‌ದು ಜಿಲ್ಲೆ ದೊಡ್ಡದು ಅತಿ ಹೆಚ್ಚು ನಿಗಮ ಮಂಡಳಿ ಸ್ಥಾನ ನೀಡಿ ಎಂದಿದ್ದೇವೆ. ಕೆರೆ ನಿರ್ಮಾಣಕ್ಕೆ 72 ಜಮೀನು ಬೇಡಿಕೆ ಇಡ್ತಿರೋ ವಿಚಾರ ಅದನ್ನ ಪರಿಶೀಲನೆ‌ ಮಾಡ್ತಿನಿ ಎಂದರು.  

ಬೆಳಗಾವಿಯಲ್ಲಿ 9೦ ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ರಾಜ್ಯ, ಕೇಂದ್ರ ಸರ್ಕಾರಗಳು ಶಾಸ್ವತ ಪರಿಹಾರ ಕಂಡುಕೊಳ್ಳಬೇಕು.

ವೈದ್ಯಕೀಯ ಶಿಕ್ಷಣ ಸಚಿವರ ‌ಜೊತೆಯೆ ಸಭೆ ಮಾಡಿದ ವಿಚಾರ, ಸೂಪರ್ ಸ್ಪೇಷಾಲಿಟಿ ಆಸ್ಪತ್ರಗೆ‌ ಸಿಬ್ಬಂಧಿ ಬೇಕು. ಫೈನಾನ್ಸ್ ನಿಂದ ಅಪ್ರೂವಲ್ ಸಿಕ್ಕಿಲ್ಲ ಆದಷ್ಟು ಬೇಗ ಆಗುತ್ತೆ ಎಂದರು. 

ಬೆಳಗಾವಿ ಬಿಜೆಪಿ ಹಾಗೂ ಚಿಕ್ಕೋಡಿಯಲ್ಲಿ ಕಾಂಗ್ರೇಸ್ ಗೆಲುವಿಗೆ ಎರಡು ಶಕ್ತಿ ಕಾರಣ ಎಂಬ ಹೆಬ್ಬಾಳಕರ್ ಹೇಳಿಕೆ ವಿಚಾರ, ಅದನ್ನ ನೀವೆ ಸ್ಟಿಂಗ್ ಆಪರೇಷನ್ ಮಾಡಿ ಹೇಳಬೇಕು ಜೇಮ್ಸ್ ಬಾಂಡ್ ರೀತಿ ನೀವೆ ಸ್ಟಿಂಗ್ ಮಾಡಿ ಎಂದರು. 

ಚಿಕ್ಕೋಡಿಯಲ್ಲಿ ಲೀಡ್ ಕಡಿಮೆ ಆದ ವಿಚಾರ, 19೦೦ ಬೂತ್ ಗಳಲ್ಲಿ ಸರ್ವೆ ಮಾಡಿಸ್ತಿವಿ ಮುಂದಿನ‌ ಚುನಾವಣೆಗೆ ಅದು ನಮಗೆ ಅನುಕೂಲ‌ ಆಗುತ್ತೆ ಹೆಚ್ಚು ಲೀಡ್ ಪಡೆಯಲು ನಮಗೆ ಸರ್ವೆ ಅನುಕೂಲ ಆಗುತ್ತೆ ಎಂದ‌ರು. 

ಸವದಿ‌ ಮನೆಯಲ್ಲಿ ತಮ್ಮನ್ನವರ್ ಸವದಿ ಕಾಗೆ ಭೇಟಿ ವಿಚಾರ, ಸಭೆ ಮಾಡಬಹುದು ಅವರು ಕೂಡಲೇಬಾರದು ಅಂತ ಏನಿಲ್ಲ ಕೂಡಿರಬಹುದು. ಚುನಾವಣೆ ಗೆದ್ದ ನಂತರ ಜಾರಕಿಹೊಳಿ ಸಹೋದರರನ್ನು ಶಾಸಕರು ತಿರುಗಿ ಬಿಳ್ತಿರೋ ವಿಚಾರವಾಗಿ ಉತ್ತರಿಸಿದ ಅವರು, ಚುನಾವಣೆಯಲ್ಲಿ ನಮ್ಮ‌‌ಜೊತೆಗೆ ಇದ್ದರೆ ಅಷ್ಟೆ ‌ಸಾಕು ಅವರು ಯಾವಾಗಲೂ ನಮ್ಮ‌‌ಜೊತೆ ಇರಬೇಕು ಎಂದೆನಿಲ್ಲ ಎಂದರು. 

ಸತೀಶ ಯಾವಾಗ ಸಿಎಂ ಆಗ್ತಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ, ಈಗಾಗಲೇ‌ ಟಿಕೇಟ್ ‌ತೆಗೆದುಕೊಡು ಕುಳಿತಿರುವೆ ಅದಕ್ಕಾಗಿ ಕಾಯಬೇಕು ಎಂದರು.

Read More Articles