ಸ್ಪಂದನ ಸಾವಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಂತಾಪ

ಗಂಗಾವತಿ :-    ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ರವರ ಸಾವಿಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ.

promotions

ಮೂರು ದಿನಗಳ ಹಿಂದೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತೆಯರ ಜೊತೆ ಸ್ಪಂದನ ಥಾಯ್ಲೆಂಡ್ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವದು ತುಂಬಾ ದುಃಖದ ಸಂಗತಿ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಾರ್ಥಿಸಿದ್ದಾರೆ. 

promotions

ಡಾ.ರಾಜ್ ಕುಟುಂಬ ಹಾಗೂ ವಿಜಯ ರಾಘವೇಂದ್ರ ಅವರ ಕುಟುಂಬದ ಸದಸ್ಯರು ನಮ್ಮ ಕುಟುಂಬದ ಜೊತೆಯಲ್ಲಿ ತುಂಬಾ ಒಡನಾಟ ಇತ್ತು. ಸ್ಪಂದನ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಿಳಿಸಿದ್ದಾರೆ.

Read More Articles