ಟೌನ್ ಹಾಲ್ ಅವ್ಯವಸ್ಥೆ ಕಂಡು ಬೆರಗಾದ ಗಂಗಾವತಿ ಶಾಸಕ ರೆಡ್ಡಿ
- Krishna Shinde
- 15 Jan 2024 , 3:34 AM
- Koppal
- 178
ಗಂಗಾವತಿ : ಗಂಗಾವತಿ ನಗರಸಭೆಯ ಟೌನ್ ಹಾಲ್ ಅವ್ಯವಸ್ಥೆ ಕುರಿತು ದೂರುಗಳು ಮೇಲಿಂದ ಮೇಲೆ ಕೇಳಿ ಬರುತಿದ್ದ ಕಾರಣ ನಗರಸಭೆ ಆಯುಕ್ತ ಆರ್. ವಿರೂಪಾಕ್ಷಮೂರ್ತಿ ಮತ್ತು ಲೋಕೋಪಯೋಗಿ ಇಲಾಖೆಯ AEE ಸುದೀಶ್ ಕುಮಾರರೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಟೌನ್ ಹಾಲ್ ಅವ್ಯವಸ್ಥೆ ಕಂಡು ಬೆರಗಾಗಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರೆಡ್ಡಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಈ ಹಿಂದೆ ನಡೆದ ಎಲ್ಲ ಲೋಪದೋಷಗಳನ್ನು ಶೀಘ್ರವೇ ಸರಿಪಡಿಸಿ ತಮ್ಮ ಸುಪರ್ದಿಗೆ ಪಡೆಯುವಂತೆ ನಗರಸಭೆ ಆಯುಕ್ತರಿಗೆ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಸೂಚಿಸಿದ್ದಾರೆ.










