13.23 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕುಮಠಳ್ಳಿ
- 14 Jan 2024 , 10:31 PM
- Belagavi
- 152
ಅಥಣಿ :ಮತಕ್ಷೇತ್ರದ ಪ್ರತಿಯೊಂದು ಗ್ರಾಮದ ರಸ್ತೆಗಳನ್ನು ಸುಧಾರಿಸುವುದರ ಜೊತೆಗೆ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು . ಮತಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.

ತಾಲೂಕಿನ ದೇವರಡೇರಟ್ಟೆಯಲ್ಲಿ 1 ಕೋಟಿ 37 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಕಾಮಗಾರಿ , ಅಗ್ರಾಣಿ ಹೊಸಟ್ಟೆಯಲ್ಲಿ 28 ಲಕ್ಷ ರೂ ವೆಚ್ಚದ ಶಾಲೆಯ 2 ಕೊಠಡಿಗಳ ಕಾಮಗಾರಿ , 20 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಕಾಮಗಾರಿ , ಮಸರಗುಪ್ಪಿಯಲ್ಲಿ 4 ಕೋಟಿ ರೂ ವೆಚ್ಚದ ಅಥಣಿಯಿಂದ ಮಸರಗುಪ್ಪಿ ರಸ್ತೆ , ಕಾಮಗಾರಿ , 1 ಕೋಟಿ ರೂ ವೆಚ್ಚದ ಮಸರಗುಪ್ಪಿ - ತೇವರಟ್ಟಿ ರಸ್ತೆ ಕಾಮಗಾರಿ , 14 ಲಕ್ಷ ವೆಚ್ಚದ ಶಾಲೆಯ 1 ಕೊಠಡಿ ಕಾಮಗಾರಿ , ಸಿನ್ನಾಳ ಗ್ರಾಮದಲ್ಲಿ 1 ಕೋಟಿರೂ ವೆಚ್ಚದ ಜಲ ಜೀವನ್ ಮಿಶನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ , ಹುಲಗಬಾಳಿ ಗ್ರಾಮದಲ್ಲಿ 91 ಲಕ್ಷರೂ ವೆಚ್ಚದ ಜಲ ಜೀವನ್ ಮಿಶನ್ ಯೋಜನೆಯಡಿ • 1 ಕೋಟಿ 29 ಲಕ್ಷ ರೂ ವೆಚ್ಚದ ಆಕಳಕಲ್ಲು ಹತ್ತಿರ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ , ಹಲ್ಯಾಳ ಗ್ರಾಮದಲ್ಲಿ 1 ಕೋಟಿ 23 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಕಾಮಗಾರಿ , 65 ಲಕ್ಷ ರೂ ವೆಚ್ಚದ ಹಲ್ಯಾಳ ( ನವಗ್ರಾಮ ) ದಲ್ಲಿ ಕುಡಿಯುವ ನೀರಿನ ಕಾಮಗಾರಿ , ನಂದಗಾಂವ ಗ್ರಾಮದಲ್ಲಿ 60 ಲಕ್ಷ ರೂ ವೆಚ್ಚದ 1.5 ಕೀಮೀ ನಂದಗಾಂವದಿಂದ ದಬದಬಹಟ್ಟ ರಸ್ತೆ ಕಾಮಗಾರಿ ಹಾಗೂ 56 ಲಕ್ಷ ರೂ ವೆಚ್ಚದ 4 ಶಾಲಾ ಕೊಠಡಿಗಳ ಕಾಮಗಾರಿ ಭೂಮಿ ಪೂಜೆ ಸೇರಿಸಿ ಒಟ್ಟು 13.23 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮಾತನಾಡಿದರ ು.ತಾಲೂಕಿನ ಸುಮಾರು 50 ಶಾಲೆಗಳಲ್ಲಿ ಮಕ್ಕಳಿಗೆ ಆಧುನಿಕ ತಪತ್ರಜ್ಞಾನ ಒದಗಿಸಲು 2 ಕೋಟಿ ರೂವೆಚ್ಚದಲ್ಲಿ ಸ್ಮಾರ್ಟ್‌ಕ್ಲಾಸ್ ತರಗತಿಗಳನ್ನು ಅಳವಡಿಸಲಾ ಗುವುದು , ಇದರಿಂದ ಗ್ರಾಮೀಣ ಮಕ್ಕಳು ಸಹ ಪಟ್ಟಣದಮಕ್ಕಳಂತೆ ಶೈಕ್ಷಣಿಕವಾಗಿ ಮುಂದುವರೆಯಲು ಸಹಯಾಕವಾಗುತ್ತದೆ ಎಂದರು.ಈ ವೇಳೆ ಗುತ್ತಿಗೆದಾರರಾದ ರಾಜು.ಮರಡಿ.ಶ್ರೀಶೈಲ ಚಮಕೇರಿ , ಎಸ್ ಆರ್ ಧೂಳಪ್ಪನ್ನವರ , ಗಿರೀಶ ಸಜ್ಜನ , ಸಂತೋಷ ಕಕಮರಿ , ಕಲ್ಲಪ್ಪ ಥಾವಟೆ , ಮಲ್ಲಿಕಾರ್ಜುನ ಕುಂಬಾರ.ಎಮ್ ಎಮ್ ಇಟ್ಟೆ ಮುಖಂಡರಾದ ನಿಂಗಪ್ಪ ನಂದೇಶ್ವರ , ಈರಣಗೌಡ ಪಾಟೀಲ , ಮಲ್ಲಿಕಾರ್ಜುನ ಅಂದಾಣಿ , ಸಿದಗೌಡ ಕೆಂಪಿ , ಸುರೇಶ ವಾಡೇದ , ಸಂಗಮೇಶ ಇಂಗಳಿ , ಪ್ರಕಾಶ ಗುಮಚಿ , ಸೇರಿದಂತೆ ಇತರರಿದ್ದರು .

ವರದಿ : ಅಜಿತ ಕಾಂಬ್ಳೆ ಲೋಕವಿವ ನ್ಯೂಸ್ ಅಥಣಿ










