ಛತ್ರಪತಿ ಶಿವಾಜಿ ಮಹಾರಾಜರ ನವೀಕೃತ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಗ್ರಾಮೀಣ ಕ್ಷೇತ್ರದ ಬಿಜಗರಣಿ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನವೀಕರಿಸಲಾದ ಮೂರ್ತಿಯ ಪ್ರತಿಷ್ಠಾಪನೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ನೆರವೇರಿಸಿದರು.

promotions

ಗ್ರಾಮದೆಲ್ಲೆಡೆ ನಿರ್ಮಾಣವಾಗಿದ್ದ ಹಬ್ಬದ ವಾತಾವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಮಹೋನ್ನತ ಸಾಧನೆಗೈದ ರಾಷ್ಟ್ರಪುರುಷರು ನಮಗೆಲ್ಲ ಆದರ್ಶರಾಗಿದ್ದು, ಅಂತವರ ಮೂರ್ತಿಗಳು ಮುಂದಿನ ಪೀಳಿಗೆಗೆ ದಾರಿದೀಪದಂತಿರುತ್ತವೆ. ಹಾಗಾಗಿ ಅಂತವರ ಪುತ್ಥಳಿ ಸ್ಥಾಪನೆ ನಮಗೆ ಸದಾ ಸ್ಫೂರ್ತಿಯಾಗಿರುತ್ತವೆ ಎಂದು ಹೆಬ್ಬಾಳಕರ್ ಹೇಳಿದರು.

promotions

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮನೋಹರ ಬೆಳಗಾಂವ್ಕರ್, ಯಲ್ಲಪ್ಪ ಬೆಳಗಾಂವ್ಕರ್ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅಶೋಕ ಕಾಂಬಳೆ, ಅಶೋಕ ಬಿರ್ಜೆ, ನಾಮದೇವ ಮೋರೆ, ಸಂದೀಪ ಅಷ್ಟೆಕರ್, ಅಪ್ಪು ಕಾಂಬಳೆ, ಮೈಬೂಬ್ ನಾವಗೇಕರ್, ಮಂಗಳ ಜಾಧವ್, ಶೀತಲ್ ತಾರೀಹಾಳ್ಕರ್, ಮಹೇಶ ಪಾಟೀಲ, ಶ್ರೀರಂಗ ಭಾಸ್ಕಳ, ವಸಂತ ಅಷ್ಟೆಕರ್, ದಾಮು ಮೋರೆ, ಪುಂಡಲೀಕ್ ಜಾಧವ್ ಮುಂತಾದವರು ಉಪಸ್ಥಿತರಿದ್ದರು.

Read More Articles