ಲೋಹಗಡ್ ಕಿಲ್ಲಾ ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದಲ್ಲಿ ಸ್ವರಾಜ ಯುವಕ ಮಂಡಳ ವತಿಯಿಂದ ದೀಪಾವಳಿ ಹಬ್ಬದ ನಿಮಿತ್ಯವಾಗಿ ನಿರ್ಮಿಸಲಾಗಿದ್ದ ಲೋಹಗಡ್ ಕಿಲ್ಲಾವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಇಂದಿನ ಯುವಕರು ಮುಂದುವರಿಸಿಕೊಂಡು ಹೋಗುತ್ತಿರುವುದು ಪ್ರಶಂಸನೀಯವಾಗಿದೆ. ಹಾಗೆಯೇ ಯುವಕರು ಸಮಾಜದಲ್ಲಿ ಸದಾ ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ಜಾತಿ, ಮತ, ಭಾಷೆಯ ಭೇದ ಮಾಡದೆ ಎಲ್ಲರೂ ಒಂದಾಗಿ ಮುನ್ನಡೆಯೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.

promotions

ಈ ಸಮಯದಲ್ಲಿ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅಶ್ವಿನಿ ಕಣ್ಣೂರಕರ್, ಲಕ್ಷ್ಮೀ ವೇತಾಳ, ಮಹೇಶ ಸುತಾರ, ರಮೇಶ ಕಣ್ಣೂಕರ್, ಮಾರುತಿ ಪಾಟೀಲ, ಸಂಜಯ ಪಾಟೀಲ, ಎಲ್ ಎನ್ ಪಾಟೀಲ, ಅಕ್ಷಯ ಕಣ್ಣೂಕರ್, ಬಾಲಕೃಷ್ಣ ಪಾಟೀಲ, ಮಯೂರ ಪಾಟೀಲ, ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು.

promotions

Read More Articles