ದಶಲಕ್ಷಣ ನೊಂಪಿ ಪರ್ವ 2022 ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿಯ 108 ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ದಶಲಕ್ಷಣ ನೊಂಪಿ ಪರ್ವ 2022 ರ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

promotions

ಹಲಗಾ ಗ್ರಾಮದಲ್ಲಿ ಈ ದಶಲಕ್ಷಣ ನೊಂಪಿ ಕಾರ್ಯಕ್ರಮ ಹದಿನಾರು ದಿನಗಳ ಕಾಲ ಜರುಗಲಿದ್ದು, ಹಲವಾರು ಮಹಿಳೆಯರು ಮಡಿವಂತರಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಖೇನ ಆತ್ಮಶುದ್ಧಿಗಾಗಿ, ನಾಡಿನ ಏಳ್ಗೆಗಾಗಿ, ದೇಶದ ಐಕ್ಯತೆಗಾಗಿ, ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಸದಾಕಾಲವೂ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ‌.

promotions

ಇಂತಹ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಖುಷಿ ಎನಿಸುತ್ತಿದೆ. ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಅಹಿಂಸೆ ಸೇರಿದಂತೆ ಜೈನ ಧರ್ಮದ ಎಲ್ಲ ತತ್ವಗಳು ಇಡೀ ಸಮಾಜಕ್ಕೆ ಆದರ್ಶವಾಗಿವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಚಾರುಕೀರ್ತಿ ಸೈಬಣ್ಣವರ, ಮಹಾವೀರ ಪಾಟೀಲ, ಧನ್ಯಕುಮಾರ ದೇಸಾಯಿ, ಸುಕುಮಾರ ಹುಡೇದ್, ಸಂತೋಷ ಪಾಟೀಲ, ಅಲ್ಲಪ್ಪ ಹುಡೇದ್, ಶಾಂತು ಬೆಲ್ಲದ, ಬಾಬು ದೇಸಾಯಿ, ಮಹೇಂದ್ರ ಕ್ಯಾಸನ್ನವರ, ರಾಜೇಂದ್ರ ದೇಸಾಯಿ, ಅಣ್ಣಾಸಾಹೇಬ್ ದೇಸಾಯಿ, ಪ್ರಶಾಂತ ಮರಕಲ್, ಡಿ ಎಚ್ ಪಾಟೀಲ, ಯಲ್ಲಪ್ಪ ಘಟ್ಟದ್, ಮಹಾವೀರ ಹಲವಾರು ಮಹಿಳೆಯರು, ಗ್ರಾಮದ ಜನರು ಉಪಸ್ಥಿತರಿದ್ದರು.

Read More Articles