ಮಹಿಳೆಯರ ಉಚಿತ ಪ್ರಯಾಣಕ್ಕೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ.

ಬೈಲಹೊಂಗಲ : ಸರ್ಕಾರದ  ಮಹತ್ತರ  ಮಹಿಳೆಯರ ಶಕ್ತಿ ಯೋಜನೆಗೆ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರಭಾವತಿ ಪಕೀರಪುರ ಚಾಲನೆ ನೀಡಿದರು. 

promotions

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, 5 ಗ್ಯಾರಂಟಿಯಲ್ಲಿ ಮೊದಲನೇಯದು ಈಡೇರಿಸಿದ್ದೇವೆ. ಇದರಿಂದ ಬಡ, ಮಧ್ಯಮ ವರ್ಗದ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ರಾಜ್ಯದ ಯಾವುದೇ ಮೂಲಿಗೆ ಸಂಚರಿಸಬಹುದು ಎಂದರು. 

promotions

ಬೈಲಹೊಂಗಲದಿಂದ ಬೆಳಗಾವಿಗೆ ಸಂಚರಿಸುವ ಮಹಿಳೆಯರಿಗೆ ಹೂವು ನೀಡಿ, ಸಿಹಿ ಹಂಚಿ ಉಚಿತ ಟಿಕೇಟ ನೀಡಿ ಬೀಳ್ಕೊಡಲಾಯಿತು‌. 
ಘಟಕ ವ್ಯವಸ್ಥಾಪಕ ಶಿವಮೂರ್ತಿ ತಳವಾರ, ಸಿಪಿಐ ಪಂಚಾಕ್ಷರಿ ಸಾಲಿಮಠ,  ಕಾರ್ಮಿಕ ಮುಖಂಡ ಸುರೇಶ ಯರಡ್ಡಿ, ಅಬ್ಬಾಸ ದೇವಲಾಪುರ, ಸಾರಿಗೆ ನಿಯಂತ್ರಕರು ಪೀರಸಾಬ ನದಾಫ, ಸದಾಶಿವ ಕಲಾಳ ಹಾಗೂ ಪ್ರಯಾಣಿಕರು ಇದ್ದರು.

Read More Articles