ಕರಿಮಸೂತಿ ಮತ್ತು ತುಂಗಳ ಏತನೀರಾವರಿ ಯೋಜನೆಯ ಯಂತ್ರಗಳಿಗೆ ಶಾಸಕ ಸವದಿ ಚಾಲನೆ
- shivaraj bandigi
- 17 Jun 2024 , 2:01 PM
- Athani
- 4083
ಅಥಣಿ : ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಹಿಪ್ಪರಗಿ ಯೋಜನೆಯಡಿಯಲ್ಲಿ ಬರುವ ಕರಿಮಸೂತಿ ಸಹ ನೀರಾವರಿ ಯೋಜನೆ -1 ಮತ್ತು 2 ನೇ ಹಂತ , ಸಾವಳಗಿ - ತುಂಗಳ ಏತ ನೀರಾವರಿ ಯೋಜನೆಯ ಯಂತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಇಂದು ಮುಂಜಾನೆ ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು .

ಇಂದು ತಾಲ್ಲೂಕಿನ ಹಲ್ಯಾಳ ಗ್ರಾಮದಲ್ಲಿರುವ ಶಿವಲಿಂಗೇಶ್ವರ ಮಡ್ಡಿಯಲ್ಲಿರುವ ಎರಡನೇ ಜಾಕ್ ವೆಲ್ ನಲ್ಲಿ ವಿದ್ಯುತ್ ಪಂಪಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು ವರ್ಷ ಜುಲೈ 18ರಂದು ಚಾಲನೆ ನೀಡಲಾಗಿತ್ತು ಆದರೆ ಈ ಬಾರಿ ಪ್ರತಿವರ್ಷ ಕ್ಕಿಂತ ಮುಂಚಿತ ವಾಗಿ ಜೂನ 17 ರಂದು ಒಂದು ತಿಂಗಳು ನೀರು ಹರಿಸಲಾಗುತ್ತಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕೆರೆ ಹಳ್ಳಗಳಿಗೆ ಹರಿಸುವ ಮೂಲಕ ಕೆರೆಕಟ್ಟೆಗಳನ್ನು ತುಂಬುವುದರ ಜೊತೆಗೆ ಭೂಮಿಯಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಅನೂಕೂಲವಾಗುತ್ತದೆ ತಾವು ಬದುಕುವುದರ ಜೊತೆಗೆ ಇತರರನ್ನು ಬದುಕಿಸಲು ರೈತರು ಸಹಕರಿಸಬೇಕು ಆರಂಭಿಕ ರೈತರು ಕೊನೆಯ ರೈತರಿಗೆ ನೀರು ತಲುಪಿಸಲು ಸಹಕಾರ ನೀಡಬೇಕೆಂದು ಕೋರಿದರು . ಅತಿ ಶೀಘ್ರವಾಗಿ 9 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಚಾಲನೆ ನೀಡಲಾಗುವುದು. ಅದೇ ರೀತಿ ಕೊಟ್ಟಲಗಿ ಯಾತ ನೀರಾವರಿಯನ್ನು 24 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಾಗಿದ್ದು ಮಾನ್ಯ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಚಾಲನೆ ನೀಡಿದ್ದು ಶೀಘ್ರವಾಗಿ ಆರಂಭಿಸಲಾಗುವುದೆಂದು ಹೇಳಿದರು. ರೈತ ಸಂತೋಷದಿಂದಿದ್ದರೆ ನಾಡು ಸಂತೋಷವಾಗಿರಲು ಸಾಧ್ಯ ನಾಡಿಗೆ ಅನ್ನ ಹಾಕುವ ರೈತನಿಗೆ ನೀರು ನೀಡಿದರೇ ನಾಡಿಗೆ ಅನ್ನ ನೀಡುತ್ತಾನೆ.ಈ ಹಿನ್ನೆಲೆಯಲ್ಲಿ ಇಂದು

2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣವನ್ನು ಪರಿಗಣಿಸಿ ನೀರನ್ನು ಹರಿಬಿಡಲಾಗುತ್ತಿದೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನದಿಯಲ್ಲಿ ನೀರಿನ ಹರಿವಿನ ಲಭ್ಯತೆ ಹಾಗೂ ವಿದ್ಯುಚ್ಛಕ್ತಿಯ ಲಭ್ಯತೆಗೆ ಅನುಗುಣವಾಗಿ ನೀರನ್ನು ಹರಿಸಲಾಗುವುದು ಕಾಲುವೆಗಳಲ್ಲಿ ಹರಿಸುವ ನೀರನ್ನು ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ರೈತರು ಪ್ರತಿಯೊಬ್ಬರು ಸಹಕರಿಸಿಕೊಂಡು ನೀರನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಲು ಕೋರಿದರು. ನೀರನ್ನು ಅನಾವಶ್ಯಕವಾಗಿ ಪೋಲು ಮಾಡುವುದನ್ನು ನಿರ್ಬಂಧಿಸಲಾಗಿದೆ .ಕಾಲುವೆಗೆ ನೀರನ್ನು ಹರಿಸುವ ಅವಧಿಯಲ್ಲಿ ಖಾಸಗಿಯಾಗಿ ಪಂಪು ಮತ್ತು ಪೈಪುಗಳ ಮೂಲಕ ನೀರನ್ನು ಎತ್ತುವುದು , ಕಾಲುವೆಗೆ ಅಡ್ಡ ಕಟ್ಟುವುದು , ಅನಧಿಕೃತವಾಗಿ ಕಾಲುವೆಗಳಿಗೆ ಹಾನಿ ಉಂಟು ಮಾಡದೆ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಕೌಲಗುಡ್ಡ ಹಣಮಾಪುರದ ಅಮರೇಶ್ವರ ಮಹಾರಾಜರು ಮಾತನಾಡಿ ರೈತರು ಪರಿಸರ ಸಂರಕ್ಷಣೆಯ ಜೊತೆಗೆ ನಿಸರ್ಗ ಸಂರಕ್ಷಿಸಬೇಕು ಜೊತೆಗೆ ನೀರನ್ನು ಪೋಲು ಮಾಡದೆ ಸಮರ್ಪಕವಾಗಿ ಬಳಸಿಕೊಂಡು ಭೂಮಿ ರಕ್ಷಣೆ ಜೊತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕೆಂದರು. ಪೂಜ್ಯರಾದ ಹೊನವಾಡದ ಬಾಬುರಾವ್ ಮಹಾರಾಜರು ಮಾತನಾಡಿ ರೈತರು ಸಮರ್ಪಕವಾಗಿ ಒಕ್ಕಲುತನ ಕಾರ್ಯಕ್ಕೆ ಪೂರಕವಾದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಈ ವೇಳೆ ಅಥಣಿ ವೃತ್ತದ ಸೂಪರಿಟೆಂಡಿಂಗ್ ಇಂಜಿನೀಯರ್ ಪ್ರವೀಣ ಹುಣಸಿಕಟ್ಟಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ,
ಶಿವು ಗುಡ್ಡಾಪುರ, ಮಾಜಿ ಜೀಪ ಸದಸ್ಯ ಸುರೇಶ ಮಾಯಣ್ಣವರ ,ರಘುನಾಥ ದೊಡ್ಡನಿಂಗಪ್ಪಗೋಳ,
ಶಾಂತು ನಂದೇಶ್ವರ, ಅಶೋಕ ಮಗದುಮ್, ಶಿವಾನಂದ ದಿವಾನಮಳ, ರಾಮನಗೌಡ ಪಾಟೀಲ್, ಗುರು ದಾಶ್ಯಾಳ, ಸಂಗಯ್ಯ ಪೂಜಾರಿ, ಅಪ್ಪು ನೇಮಗೌಡ,ಸಿದ್ದರಾಯ ನಾಯಿಕ, ಸಂತೋಷ ಸಾವಡಕರ, ಮಾದೇವ ನಾಗನೂರ ನೀರಾವರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗ ರೈತ ಮುಖಂಡರು, ರೈತರು ಸಾರ್ವಜನಿಕರು ಉಪಸ್ಥಿತರಿದ್ದರು .
ವರದಿ : ರಾಹುಲ್ ಮಾದರ










