ಮಾತಿಗೆ ತಪ್ಪಿದ ಮೋದಿ : ಬಿಜೆಪಿ ವಿರುದ್ದ ಸವದಿ ಟಾಕ್ ಸಮರ
- shivaraj bandigi
- 25 Mar 2024 , 5:02 PM
- Belagavi
- 591
ಅಥಣಿ :

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಅಥಣಿ ಪಟ್ಟಣದ ಶಿವಣಗಿ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜರುಗಿತ್ತು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ದಿನೇ ದಿನೇ ರಂಗೇರಿತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ ಆದರಿಂದ ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆ ಜರುಗಿತು
ಇದೇ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಅವರು ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಬಾಳಿಗೆ ಬೆಳಕಾಗಿವೆ ಮೋದಿಜಿ ಅವರ ಆಡಳಿತವು ತಲುಪಿಲ್ಲ ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು
ಈ ಸಂದರ್ಭದಲ್ಲಿ ಅಥಣಿ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಯುವ ಕಾಂಗ್ರೆಸ್ ನಾಯಕರಾದ ಶ್ರೀ ರಾಹುಲ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯುವ ಕಾಂಗ್ರೆಸ್ ನಾಯಕಿ ಶ್ರೀ ಪ್ರಿಯಾಂಕ ಜಾರಕಿಹೊಳಿ ಜಿಲ್ಲಾ ಅಧ್ಯಕ್ಷರು ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು
ವರದಿ : ರಾಹುಲ ಮಾದರ










