ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ! ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ
- shivaraj bandigi
- 25 Jan 2024 , 8:58 PM
- Belagavi
- 375
ಬೈಲಹೊಂಗಲ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಬೆಳಗಾವಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.

ಅವರು ಗುರುವಾರ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲವಡೆ ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಎರಡು ಅವಧಿಯ ಕೇಂದ್ರದ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿಯ ಪರ್ವವನ್ನೆ ಹರಿಸಿದೆ. ದೇಶದ ಪ್ರತಿಯೊಬ್ಬರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಹಗಲಿರುಳು ಶ್ರಮಿಸುತ್ತಿದ್ದು ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾದ ಚುಕ್ಕಾಣಿ ಹಿಡಿಯಲಿದೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಗೋಡೆಬರಹ ಬರೆದು ಮಾತನಾಡಿ, ನಮ್ಮೆಲ್ಲರ ಗುರಿ ಮತ್ತೊಮ್ಮೆ ಮೋದಿಯಾಗಿರಲಿ, ಸಶಕ್ತ ಭಾರತದ ನಿರ್ಮಾಣಕ್ಕಾಗಿ ಮೋದಿಯವರ ಆಯ್ಕೆ ಮುಖ್ಯವಾಗಿದೆ ಎಂದರು. , ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಮಂಡಲ ಉಪಾಧ್ಯಕ್ಷ ಸುಭಾಸ್ ತುರುಮರಿ, ಪ್ರಪುಲ ಪಾಟೀಲ,ಸಂತೋಷ ಹಡಪದ, ಲಕ್ಕಪ್ಪ ಕಾರಗಿ, ಬಸವರಾಜ ದೊಡ್ಡಮನಿ ,ಗೌಡಪ್ಪ ಹೊಸಮನಿ, ಮಂಜು ಮರಶೆಟ್ಟಿ, ಜಗದೀಶ್ ಮೇಟಿ,ಬಸವರಾಜ ಬೈಲವಾಡ,ಗುರುಪಾದ ಅಂಗಡಿ ,ಬಸವರಾಜ ಗುರುವನ್ನವರ,,ಶಿವಯೋಗಿ ಹುಲ್ಲೆನ್ನವರ , ರಾಮನಿಂಗ ಬಳಿಗಾರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ವರದಿ : ರವಿಕಿರಣ್ ಯಾತಗೇರಿ










