ಸೋಲಿನ ಹತಾಶೆಯಲ್ಲಿ ಮೃಣಾಲ, ಸಂಸದೆ ಮಂಗಲ ಅಂಗಡಿ ವಾಗ್ದಾಳಿ
- shivaraj bandigi
- 22 Apr 2024 , 12:03 PM
- Belagavi
- 349
ಬೆಳಗಾವಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಳರ್ ಹೀನಾಯವಾಗಿ ಸೋಲಿಸಲಿದ್ದಾರೆ. ಅವರು ಸುಳ್ಳು ಆರೋಪ ಮಾಡುತ್ತಿದ್ದು ಇದಕ್ಕೆ ಕೇಸ್ ದಾಖಲು ಮಾಡಲಾಗುವುದು ಎಂದು ಸಂಸದೆ ಮಂಗಲ ಅಂಗಡಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದ್ರೋಹ, ಹಿಂದು ವಿರೋಧಿ ಯನ್ನು ಕ್ಷೇತ್ರದ ಜನರು ಮರೆತಿಲ್ಲ. ಮನೆ ಮಗಳಿಗೆ ಕಲಿಸಿದ ಪಾಠವನ್ನು ಮನೆ ಮಗನಿಗೂ ಕಲಿಸಲಿದ್ದಾರೆ. ಇವರ ಡ್ರಾಮಾ ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು. ಕಳೆದ 20 ವರ್ಷದಲ್ಲಿ ನಾವು 16 ಸಾವಿರ ಕೋಟಿ ರೂ.ಗಳ ಅನುದಾನ ತಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಮೃಣಾಲ್ ಸೋಲಿನ ಹತಾಶೆಯಲ್ಲಿ ಬೇಕಾದನ್ನು ಮಾತನಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.