ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಬೆಳಗಾವಿ ಬಿಜೆಪಿ ಒತ್ತಾಯ

ಬೆಳಗಾವಿ: ಬಿಜೆಪಿ ನಾಯಕರಾದ ಸಂಜಯ ಪಾಟೀಲ, ಅನಿಲ್ ಬೆಣಕೆ ಮತ್ತು  ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಪ್ರಬಲ ಒತ್ತಾಯ ವ್ಯಕ್ತಪಡಿಸಿದ್ದಾರೆ. ಇಂದು ಹೈಕೋರ್ಟ್‌ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನ ವಿರುದ್ಧ ತೀರ್ಪು ನೀಡಿದ ಹಿನ್ನೆಲೆ, ಬಿಜೆಪಿ ನಾಯಕರ ತಂಡ ಸಿಎಂ ರಾಜೀನಾಮೆ ಕುರಿತು ತೀವ್ರ ಒತ್ತಡ ತರುತ್ತಿದೆ.

promotions

ಸಂಜಯ ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ದೇಶದ ಸಂವಿಧಾನ ಮತ್ತು ಕಾನೂನಿಗೆ ಗೌರವ ಸಲ್ಲಿಸುವ ಕಾರ್ಯವಾಗಲಿದೆ. ಭಾರತದಲ್ಲಿ ಸಂವಿಧಾನ ಮತ್ತು ಕಾನೂನಿಗೆ ಎಲ್ಲರಿಗೂ ಸಮಾನ ಗೌರವವಿದೆ. ಕಾನೂನಿನ ಆಜ್ಞೆ ಪಾಲನೆ ಎಲ್ಲರಿಗೂ ಅನಿವಾರ್ಯ. ಸಿದ್ದರಾಮಯ್ಯ ಕೂಡ ಇದಕ್ಕೆ ಹೊಂದಿಕೆಯಾಗಬೇಕು. ಅವರು ತಕ್ಷಣವೇ ತಮ್ಮ ಸ್ಥಾನ ತ್ಯಜಿಸಬೇಕು ಎಂದು ಕಟುವಾಗಿ ಹೇಳಿದರು.

promotions

ಅನಿಲ್ ಬೆಣಕೆ ಅವರು,ಸಿದ್ದರಾಮಯ್ಯ ಹೈಕೋರ್ಟ್ ತೀರ್ಪಿಗೆ ಗೌರವ ನೀಡಬೇಕು ಮತ್ತು ತಕ್ಷಣವೇ ರಾಜೀನಾಮೆ ನೀಡಬೇಕು. ಕಾನೂನಿಗೆ ಅಪ್ಪಳಿಸುವವರು ಯಾವುದೇ ಸ್ಥಾನದಲ್ಲಿರುವುದಕ್ಕೆ ಅವಕಾಶ ನೀಡಬಾರದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ರಾಜೀನಾಮೆ ಬೇಡಿಕೆಯ ಕುರಿತು ತೀವ್ರ ಒತ್ತಡ ತರುತ್ತಿರುವುದರಿಂದ, ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡುವ ನಿರೀಕ್ಷೆಯಲ್ಲಿದ್ದಾರೆ.

Read More Articles