ಸಚಿವ ಕತ್ತಿ ನಿಧನಕ್ಕೆ ಮುನಿರತ್ನ ಸಂತಾಪ

ಬೆಳಗಾವಿ: ಆಹಾರ ಮತ್ತು ನಾಗರಿಕ, ಅರಣ್ಯ ಇಲಾಖೆಯ‌ ಸಚಿವ ಉಮೇಶ ಕತ್ತಿ ಅವರು 8 ಬಾರಿ ವಿಧಾನ ಸಭೆಗೆ ಪ್ರವೇಶ ಮಾಡಿದವರು. ಇಂದು ಅವರ ಅಗಲಿಕೆಯಾಗಿದ್ದು‌ ನೋವಿನ‌ ವಿಷಯ ಎಂದು ಸಚಿವ ಮುನಿರತ್ನ ಸಂತಾಪ ಸೂಚಿಸಿದರು.

promotions

ಗುರುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮಕ್ಕೆ ಕತ್ತಿ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಉಮೇಶ ಕತ್ತಿ ಅವರು ದೂರ ದೃಷ್ಟಿಯ ನಾಯಕ. ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ‌ ನಷ್ಟವಾಗಿದೆ ಎಂದರು.

promotions

ಶನಿವಾರ ಅವರನ್ನು ಭೇಟಿ ಮಾಡಿ ಮಲೇಶ್ವರಂನಲ್ಲಿರುವ ಅರಣ್ಯ ಇಲಾಖೆಯ ಸಂಬಂಧಿಸಿದ ವಿಚಾರವಾಗಿ ಮಾತುಕತೆ ಮಾಡಿದ್ದೆ. ಮಂಗಳವಾರ ಹಟಾತಾಗಿ ಅವರಿಗೆ ಹೃದಯಾಘಾತದ ಸುದ್ದಿ ತಿಳಿದು ಆಸ್ಪತ್ರೆಗೆ ದಾವಿಸಿದಾಗ ಸಚಿವ ಕತ್ತಿ ಚಿರ ನಿದ್ದೆಗೆ ಜಾರಿದ್ದರು. ಅವರ ಅಗಲಿಕೆಯ ದುಃಖ‌ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.

Read More Articles