ಮುರುಘಾ ಶರಣರ ಲೈಂಗಿಕ ಪ್ರಕರಣ ನ್ಯಾಯಾಂಗ ತನಿಖೆಗೆ ಒತ್ತಾಯ

p>ಬೆಳಗಾವಿ: ಚಿತ್ರದುರ್ಗದ ಮುರುಘಾ‌ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನ್ಯಾಯಾಂಗ ತನಿಖೆ‌ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು‌ ನ್ಯಾಟೆ ಸಂಸ್ಥೆ ಒತ್ತಾಯಿಸಿದೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಟೆ ಸಂಸ್ಥೆಯ ಸದಸ್ಯ, ಅಥಣಿ‌ ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ಚಿತ್ರದುರ್ಗ ಅಪ್ರಾಪ್ತ ಬಾಲಕಿಯರ ಮೇಲಿನ ಅಪ್ರಾಪ್ತ ಬಾಲಿಕಿಯರ ಮೇಲಿನ ಲೈಂಗಿಕ ಕಿರುಕಳ ನೀಡಿದ್ದು ಖಂಡನೀಯ. ಪೊಲೀಸ್ ತನಿಖೆಯಿಂದ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಸಿಗುವುದು ಅನುಮಾನ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದರು.

promotions

promotions

Read More Articles