ನದಿಗೆ ಬಾಗಿನ ಅರ್ಪಣೆಯಿಂದ ಮುತ್ತೈದೆ ಯೋಗ ಬರುತ್ತದೆ ವೇ. ಮೂ.ಡಾ. ಮಹಾಂತೇಶ ಶಾಸ್ತ್ರಿ
- shivaraj B
- 30 Aug 2024 , 8:33 PM
- Bailhongal
- 607
ಬೈಲಹೊಂಗಲ- ಉಕ್ಕಿ ಹರಿಯುವ ನದಿಗೆ ಬಾಗಿನ ಅರ್ಪಣೆ ಮಾಡಿದರೆ ಗಂಗಾ ಮಾತಗೆ ಸೀಮಂತ ಕಾರ್ಯ ಮಾಡಿದಂತೆ ಎಂದು ದುರ್ಗಾದೇವಿ ದೇವಸ್ಥಾನದ ಮುಖ್ಯ ಟ್ರಸ್ಟಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ, ಮುಜರಾಯಿ ಇಲಾಖೆ ಸದಸ್ಯರಾಗಿರುವ ವೇ.ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಹೇಳಿದರು.

ಅವರು ಸಮೀಪದ ನಯಾನಗರ ಗ್ರಾಮದ ಬಳಿ ಇರುವ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿ, ಈ ಭಾಗದ ರೈತರ ಹಾಗೂ ವರ್ಗದ ಜನರಿಗೆ ಒಳಿತು ಆಗುತ್ತದೆ. ಶ್ರಾವಣ ಮಾಸದ ಈ ಶುಭ ಶುಕ್ರವಾರದಂದು ಗೋದೋಳಿ ಲಗ್ನ ಸಮಯದಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪಿಸುವ ವಿನೋತನ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನಡೆಯಿತು ಎಂದರು. ಸುಮಾರು ಏಳು ಜನ ಪುರೋಹಿತರಿಂದ ಮಂತ್ರಘೋಷಗಳ ಮದ್ಯೆ ವಿಧಿ ವಿಧಾನವಾಗಿ ಬಾಗಿನ ಸಮರ್ಪಣೆ ಕಾರ್ಯಕ್ರಮ ನಡೆಯಿತು ಎಂದರು. ಮಲಪ್ರಭಾ ನದಿಯು ತುಂಬಿ ಹರಿಯುತ್ತಿದ್ದು, ಹೆಣ್ಣು ಮಕ್ಕಳ ಸೀಮಂತ ಕಾರ್ಯಕ್ರಮದ ರೀತಿಯಾಗಿ ಗಂಗಾ ಮಾತಿಗೂ ಕೂಡ ಸೀಮಂತ ಕಾರ್ಯ ಮಾಡಲಾಗಿದೆ ಎಂದರು.

ಈ ಭಾಗದ ರೈತಾಪಿ ವರ್ಗದ ಜನರಿಗೆ ಒಳ್ಳೆಯ ಮಳೆ ಬೆಳೆಗಾಗಿ ಪ್ರಾರ್ಥಿಸಿ, ಮಲಪ್ರಭಾ ನದಿಗೆ ಬಾಗಿನ ಸಲ್ಲಿಸಲಾಗಿದೆ. ಇದರಿಂದ ಮುತ್ತೈದೆ ಯೋಗ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ಬಸಯ್ಯ ಶಾಸ್ತ್ರಿ, ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಶಾಂತ ಶಾಸ್ತ್ರಿ,ಹುಕ್ಕೇರಿ ಹಿರೇಮಠ ಗುರುಕುಲದ ಪ್ರಾಧ್ಯಾಪಕ ಉದಯ್ ಶಾಸ್ತ್ರಿ, ಹಾಗೂ ನಿಶಾಂತ ಶಾಸ್ತ್ರಿ, ಕ್ರಿಯಾಶೀಲ ಸ್ವಾಭಿಮಾನ ಬಳಗದ ಸ್ನೇಹಿತ ಬಳಗ ಇದ್ದರು.
ವರದಿ : ರವಿಕಿರಣ್ ಯಾತಗೇರಿ










