ಬಾರದ ಮಳೆಗೆ ಹಂಬಲಿಸಿದೆ ಮನ

ಬೈಲಹೊಂಗಲ : ಸತತ ಬರಬಿಸಿಲು, ಬಿಸಿಯಾದ ಗಾಳಿಯಿಂದ ಕಂಗೆಟ್ಟ ಜನತೆಗೆ ಬೇಕಾಗಿದೆ ತಂಪಾದ ಮಳೆ. ದಯೆ ತೋರದ ವರುಣನಿಗೆ ಬೇಡಿಕೊಳ್ಳುತ್ತಿರುವ ಜನ. ಇದು ಕರುನಾಡಿನ ಪ್ರತಿಯೊಂದು ನಗರ, ಗ್ರಾಮದಲ್ಲಿ ಕೇಳಿ ಬರುತ್ತಿರುವ ಮಾತು. 

promotions

ಕಳೆದ ವರ್ಷ ವರುಣನ ಅವಕೃಪೆಗೆ ತುತ್ತಾಗಿ, ಈ ವರ್ಷವೂ ಕೂಡಾ ಅತೀ ಹೆಚ್ಚಿನ ಬಿಸಿಲಿನ‌ ಪ್ರಮಾಣ ದಾಖಲಾಗಿರುವದು ವಿಪರ್ಯಾಸ. ಆಗಸದಲಿ ಮೋಡವಿದ್ದರೂ ಸುರಿಯದ ಮಳೆರಾಯನಿಗೆ ಏನ ಅನಬೇಕೋ ತಿಳಿದಂತಾಗಿದೆ.

promotions

ಜನರ ಸಂಕಷ್ಟಕ್ಕೆ ಸ್ಪಂದಿಸಿದ ವರುಣ

ಜನರ ಕಷ್ಟ ಕೇಳಿದ ವರುಣ ಇಂದು ತನ್ನ ಪ್ರಭಾವ ಬೀರಿದಂತಿದೆ.ಇಂದು ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ಎಲ್ಲರ ಮೊಗದಲಿ ಮಂದಹಾಸ ಮೂಡುವಂತೆ ಮಾಡಿದೆ. 

ವಾಡಿಕೆಯ ಮಳೆಯ ನಿರೀಕ್ಷೆಯಲ್ಲಿದ್ದ ರೈತರಲ್ಲಿಯೂ ಕೂಡಾ ಉತ್ಸಾಹ ತೋರುತ್ತಿದೆ. ಹಿಂದಿನ ವರ್ಷ ಮುನಿಸಿಕೊಂಡ ಬಾರದೆ ಉಳಿದ ಮಳೆರಾಯನಿಗೆ ಬೇಡಿಕೊಂಡ ಜನರಿಗೆ ಕೊಂಚ ತಂಪೆರೆದು ಬಿಸಿಲಿನ ಬೇಗೆಯಲಿ ಬೇಯಿಸಿ ಬೆಂಡಂತೆ ಆದ ಪ್ರಾಣಿ, ಪಕ್ಷಿ, ಮಾನವ ಸಂಕುಲಕೆ ಇದೊಂದು ಜೀವದಾನವಾಗಿದೆ. 

ಏನ ಚಂದ ಬರಾತೇತ್ರಿ ಮಳಿ.. ಎರಡ ವರ್ಷ ಆತ ಹಿಂತಾದ ಮಳಿ ನೋಡಿರಕ್ಕಿಲ್ಲ. ಹೋದ ಸಲಾ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎಲ್ಲಾ ಮರತ ಬರೇ ಬೇಸಿಗೆ ಅಷ್ಟ ಅನಸತಿತ್ತ ಇವತ ಸ್ವಲ್ಪ ಅರಾಮ ಅನಸಾತೇತ್ರಿ...‌

ಮಲ್ಲಿಕಾರ್ಜುನ ಮರಿಬಸಪ್ಪನವರ ... ಉದ್ಯೋಗಿ

ವರದಿ  : ರವಿಕಿರಣ್   ಯಾತಗೇರಿ

Read More Articles