ಪ್ರವಾಹ ಪೀಡಿತ ಪ್ರದೇಶಗಳಲ್ಲಿ NDRF ತಂಡ ಜಿಲ್ಲಾಡಳಿತದಿಂದ ಹೈ ಅಲರ್ಟ್

ಚಿಕ್ಕೋಡಿ- ಕೃಷ್ಣಾ ನದಿ ತೀರದದಲ್ಲಿ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಹೈ ಅಲರ್ಟ ಘೋಷಣೆ ಮಾಡಿದ್ದು, ಯಡೂರ ಗ್ರಾಮದ ನದಿ ತೀರದಲ್ಲಿ NDRF ತಂಡವನ್ನು ನಿಯೋಜನೆ ಮಾಡಿದೆ.

promotions

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ  ಹಿನ್ನಲೆಯಲ್ಲಿ, ನದಿ ತೀರದಲ್ಲಿ NDRF ತಂಡ ಆಗಮಿಸಿದೆ.  ತಂಡದೊಂದಿಗೆ  ಶಾಸಕ ಗಣೇಶ ಹುಕ್ಕೇರಿ ಪ್ರವಾಹ ಪರಿಸ್ಥಿತಿ ಆಲಿಸಿದರು. ಬಳಿಕ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಪ್ರವಾಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲಾಡಳಿತದ ಜೊತೆಗೆ ತಮ್ಮ ಸ್ವಂತ 11 ಬೋಟಗಳನ್ನ ಜನರನ್ನು ಸ್ಥಳಾಂತರಿಸಲು ನಿಯೋಜಿಸಲಾಗಿದೆ ಎಂದು ತಿಳಿಸಿದರು.

promotions

Read More Articles