ವೆಸ್ಟ ಬಾಟಲ್ ಡಬ್ಬಿಗಳಿಂದ ಪಕ್ಷಿಗಳಿಗೆ ಜೀವಕಳೆ ವಿದ್ಯಾರ್ಥಿಗಳ ಕಾರ್ಯಕ್ಕೆ ನೆಟ್ಟಿಗರು ಫಿದಾ
- shivaraj bandigi
- 30 Mar 2024 , 9:06 AM
- Belagavi
- 359
ಅಥಣಿ : ಮೂಕ ಪಕ್ಷಿ ಸಂಕುಲದ ಉಳಿವಿಗೆ ಪಣತೊಟ್ಟ ಶಿಕ್ಷಕರು, ಪುಟಾಣಿಗಳ ಕೈಯಿಂದ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ಬವಣೆ ನೀಗಿಸಿ ಭೆಶ್ ಎನ್ನಿಸಿಕೊಂಡಿದ್ದಾರೆ.


ಮನುಷ್ಯ ನೀರಡಿಕೆಯಾದಾಗ ಕೇಳಬಹುದು,ಆದರೆ ಮೂಕ ಜೀವಗಳ ಕೂಗು ಯಾರಿಗೂ ಕೇಳಿಸುವುದಿಲ್ಲ. ಭಯಂಕರ ಬಿಸಿಲಿನ ತಾಪಮಾನಕ್ಕೆ ಪಕ್ಷಿಗಳು ಅಕ್ಷರಶಃ ನಲುಗಿ ಹೋಗಿವೆ ಮೂಕ ಜೀವಗಳ ಸ್ಥಿತಿಯನ್ನ ಮನಗಂಡು ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು ಮಾಡಿದ್ದೇನು ಅಂತಿರಾ ತೋರಿಸ್ತೀವಿ ನೋಡಿ.
ಬೆಳಗಾವಿಯ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ. ಪ್ರತಿಯೊಬ್ಬರು ಕೈಯಲ್ಲೊಂದು ನೀರಿನ ಬಾಟಲ್ ಅದರ ಮೇಲೊಂದು ಪ್ಲೇಟ್, ಇವೆಲ್ಲವನ್ನೂ ವಿಶೇಷವಾಗಿ ವಿನ್ಯಾಸಗೊಳಿಸಿದ ಮಕ್ಕಳು. ತಮ್ಮ ಕೈಲಾದಷ್ಟು ಪಕ್ಷಿ ಸಂಕುಲದ ಉಳುವಿಗೆ ಪಣತೊಟ್ಟು ಪ್ಲ್ಯಾಸ್ಟಿಕ್ ಹಾಗೂ ಗಿಡದ ಸಿಪ್ಪೆ,ತೆಂಗಿನಕಾಯಿ ಬಳಸಿಕೊಂಡು ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ.
ವರದಿ : ರಾಹುಲ್ ಮಾದರ










