ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದವರಿಗೆ 25 ಲಕ್ಷ ರೂ ಬಹುಮಾನ :ಏನಐಏ
- 15 Jan 2024 , 1:40 AM
- Delhi
- 145
ದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ 25 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಮತ್ತು ದಾವೂದ್ ಸಹಚರ ಛೋಟಾ ಶಕೀಲ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನವನ್ನೂ ಸಂಸ್ಥೆ ಘೋಷಿಸಿದೆ. ಆತನ ಇತರ ಮೂವರು ಸಹಾಯಕರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 15 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಹೇಳಿದೆ .

ದಾವೂದ್ ಇಬ್ರಾಹಿಂ ಮತ್ತು ಇತರರು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಅಲ್ ಖೈದಾದೊಂದಿಗೆ ಸಕ್ರಿಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎನ್ಐಎ ಹೇಳಿದೆ.

ಪಾತಕಿಗಳು ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೋ ಭಯೋತ್ಪಾದನೆ, ಭೂಗತ ಕ್ರಿಮಿನಲ್ ಸಿಂಡಿಕೇಟ್, ಮನಿ ಲಾಂಡರಿಂಗ್, FICN ನ ಚಲಾವಣೆ ಮತ್ತು ಭಯೋತ್ಪಾದಕ ನಿಧಿಯನ್ನು ಸಂಗ್ರಹಿಸಲು ಪ್ರಮುಖ ಆಸ್ತಿಗಳನ್ನು ಅನಧಿಕೃತವಾಗಿ ಹೊಂದಿರುವಂತಹ ವಿವಿಧ ಭಯೋತ್ಪಾದನೆ ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.










