ನನ್ನ ಸೋಲಿಗೆ ಯಾರು ಎದೆಗುಂದುವ ಅಗತ್ಯವಿಲ್ಲ : ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಕರಿಯಪ್ಪ

ಸಿಂಧನೂರು : ಮತ ಕ್ಷೇತ್ರದ ಜನತೆ ನನಗೆ  52 ಸಾವಿರಕ್ಕೂ ಅಧಿಕ ಮತ ನೀಡಿದ್ದಾರೆ. ಆದರೆ ನಾನು ಎಲ್ಲಾ ಮತದಾರರ ಮನಸ್ಸುಗಳನ್ನು  ತಲುಪಲು ಸಾದ್ಯವಾಗಲಿಲ್ಲ .ಈ ಹಿಂದೆ ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪನವರು  ಸೈಕಲ್ ಮೇಲೆ ಹಳ್ಳಿ ಹಳ್ಳಿ ಸುತ್ತಿ ಪಕ್ಷ ಸಂಘಟನೆ ಮಾಡಿ ಮುಖ್ಯಮಂತ್ರಿಯಾಗಿದ್ದವರು.ಚುನಾವಣೆಗಳಲ್ಲಿ ಸೋಲು ಮತ್ತು ಗೆಲುವುಗಳು ಒಂದೇ ನಾಣ್ಯದ ಎರೆಡು ಮುಖಗಳು ಇದ್ದಾಗೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವದು ಶತಸಿದ್ಧ. ಈ ಚುನಾವಣೆಯಲ್ಲಿ ನನ್ನ ಸೋಲಾಗಿದೆ  ಎಂದು ಯಾರು ಎದೆಗುಂದುವ ಅಗತ್ಯವಿಲ್ಲ. ಸಕ್ರಿಯವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗೋಣ ಎಂದು  ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಕರಿಯಪ್ಪ ಭಾವುಕರಾಗಿ ಹೇಳಿದರು.

promotions

ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ ನನಗಾಗಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಶಿಸ್ತು ಬದ್ದ ಕೆಲಸ ಎಂದರೆ ಅದು ಬಿಜೆಪಿ ಪಕ್ಷದಲ್ಲಿ  ಮಾತ್ರ ಕಾಣಲು ಸಾಧ್ಯ ಎಂದು ಬಾವುಕರಾದ ಕೆ. ಕರಿಯಪ್ಪ, ಚುನಾವಣೆ ಸಂದರ್ಭದಲ್ಲಿ ಕೆಲವು ತಪ್ಪು-ಒಪ್ಪುಗಳು ಆಗಿರಬಹುದು. ಜಾತಿ ಬೇಧವಿಲ್ಲದೆ ಎಲ್ಲರೂ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜಿ.ಪಂ, ತಾ.ಪಂ, ಲೋಕಸಭಾ ಚುನಾವಣೆಗಳು ಬರಲಿವೆ. ನನಗಾಗಿ ನೀವು ದುಡಿದಿದ್ದೀರಿ. ನಿಮಗಾಗಿ ನಾನು ಹಾಗೂ ವೇದಿಕೆ ಮೇಲಿರುವ ಎಲ್ಲಾ ಮುಖಂಡರು ಶ್ರಮಿಸುತ್ತೇವೆ ಎಂದರು.

promotions

ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸಿಂಧನೂರಿನಲ್ಲಿ ಬಿಜೆಪಿ ಪಕ್ಷದ ಹೊಸ  ಶಕ್ತಿಯೊಂದು  ಉದಯವಾಗಲಿದೆ. ಬದಲಾವಣೆಯಾಗಲಿದೆ. ಎನ್ನುವ ನಿರೀಕ್ಷೆ ನಮ್ಮದಾಗಿತ್ತು. ಕಾಂಗ್ರೆಸ್ ಪಕ್ಷದ  ಪರವಾದ ಅಲೆ,ಮತ್ತು ಗ್ಯಾರಂಟಿ ಕಾರ್ಡ್ ಗಳ ವಿತರಣೆ ಸೇರಿದಂತೆ  ಕೆಲವಾರು ನಿರ್ಣಯಗಳು ಸೋಲಿಗೆ ಕಾರಣವಾಗಿರಬಹುದು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ಜಿ.ಪಂ., ತಾ.ಪಂ ಚುನಾವಣೆಯಲ್ಲಿ ವಿಷಯ, ವ್ಯಕ್ತಿ ಬೇರೆ ಬೇರೆಯಾಗಿರುತ್ತದೆ. ಪಕ್ಷ ಸಂಘಟನೆ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯೋಣ ಎಂದರು.

ಈ ಕಾರ್ಯಕ್ರಮದಲ್ಲಿ ವೀರೇಶ ಇಲ್ಲೂರು, ನಿರುಪಾದಪ್ಪ ವಕೀಲ, ಹನುಮೇಶ ಸಾಲಗುಂದಾ, ಎಂ.ದೊಡ್ಡಬಸವರಾಜ, ವೆಂಕಣ್ಣ ಜೋಷಿ, ಜಿ.ಶ್ರೀಹರ್ಷ, ಮರಿಯಪ್ಪ, ಲಿಂಗರಾಜ ಹೂರಾರ, ಭೀಮಣ್ಣ ಸಂಗಟಿ, ಪ್ರೇಮಾ ಸಿದ್ಧಾಂತಿಮಠ, ಶೈಲಜಾ ಪಡಕರಪ್ಪ ನೀಲಾ ಸಂಗಮೇಶ, ವೆಂಕೋಬ ನಾಯಕ, ಸುರೇಶ ಬಿಜೆಪಿ ಮುಖಂಡರಾದ ರಾಜೇಶ ಸಿದ್ದಾಪುರ, ರಾಯಪ್ಪ ವಕೀಲ ಹಿರೇಮಠ, ವೆಂಕನಗೌಡ ಮಲ್ಕಾಪುರ, ಸೇರಿದಂತೆ ಅನೇಕರು ಇದ್ದರು.

Read More Articles