ವಾಹನ ಚಾಲಕರಿಗೆ ಹೇಳೂವರು ಇಲ್ಲ ಕೇಳುವರು ಇಲ್ಲ!

ಬೈಲಹೊಂಗಲ :  ಪಟ್ಟಣದ ಜನನಿಬಿಡ ಪ್ರದೇಶ ಇಂಚಲ ಕ್ರಾಸದಲ್ಲಿ ಪ್ರತಿದಿನ ಟ್ರಾಫಿಕ ಸಮಸ್ಯೆಯಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. 

promotions

ಇಂಚಲ ಕ್ರಾಸದ ಹತ್ತಿರವಿರುವ ಕಮಾನಿನ‌ ಬಳಿ ಹಲವಾರು ಅಂಗಡಿ ಮುಂಗಟ್ಟುಗಳಿದ್ದು ಟಾಟಾ ಎಸ್ಸ್, ಲಾರಿ ಮುಂತಾದವುಗಳನ್ನು ಚಾಲಕರು ರಸ್ತೆ ಮದ್ಯೆ ನಿಲ್ಲಿಸಿ ಹೋಗೂವದರಿಂದ ಇಕ್ಕಟ್ಟಾದ ಪ್ರದೇಶದಲ್ಲಿ ಹಿಂದೆ ಬರುವ ದ್ವಿಚಕ್ರ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕುವ ಪ್ರಸಂಗ ಬಂದಿದೆ. 

promotions

ಈ ಕ್ರಾಸನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳು, ಹೊಟೇಲ್, ಮಧ್ಯದ ಅಂಗಡಿ ಹತ್ತಿರದಲ್ಲೇ ಇರುವದರಿಂದ ಗೂಡ್ಸ್ ವಾಹನ ಚಾಲಿಕರು ರಸ್ತೆ ಮದ್ಯದಲ್ಲಿ ಬೇಕಾಬಿಟ್ಟಿಯಾಗಿ ತಮ್ಮ ವಾಹನಗಳನ್ನು ನಿಲ್ಲಿಸಿ ಉಳಿದವರಿಗೆ ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿದ್ದಾರೆ. 

ಇಂತಹ ಚಾಲಕರಿಗೆ ಬುದ್ದಿಮಾತು ಹೇಳಲು ಹೋದರೆ ಜಗಳಕ್ಕೆ ನಿಂತ ಉದಾಹರಣೆಗಳು ಜರುಗಿವೆ. ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿ, ಬೆಳೆಯುತ್ತಿರುವ ಬೈಲಹೊಂಗಲ ಪಟ್ಟಣದ ಟ್ರಾಫಿಕ್ ಸಮಸ್ಯೆ ಪರಿಹರಿಸುವತ್ತ ಗಮನಕೊಡಲಿ ಎಂಬುವದು ವಾಹನ ಸವಾರರ ಬೇಡಿಕೆಯಾಗಿದೆ. 

ಟ್ರಾಫಿಕ್ ಸಮಸ್ಯೆ ನಿಯಂತ್ರಣ ಮಾಡಲು ಇಂಚಲ ಕ್ರಾಸದಲ್ಲಿ ಇಲ್ಲಿ ಟ್ರಾಫಿಕ್ ಸಿಗ್ನಲ್ ಅಥವಾ ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸುವ ಮೂಲಕ ಸಮಸ್ಯೆಗೆ ಮುಕ್ತಿ ನೀಡಬೇಕಾಗಿದೆ.

ವರದಿ :  ರವಿಕಿರಣ್  ಯಾತಗೇರಿ

Read More Articles