ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳ ಪರದಾಟ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಜೆ ಶಾಲೆ ಮುಗಿದ ನಂತರ ಮನೆಗಳಿಗೆ ಹೋಗಲು ಪರದಾಡುತ್ತಿರುವ ನೂರಾರು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.

promotions

ಕೇಂದ್ರ ಸ್ಥಾನದಲ್ಲಿರುವ ಸದಲಗಾ ಪಟ್ಟಣಕ್ಕೆ ಅಂಕಲಿ, ರೂಪಿನಾಳ, ನನದಿ, ಉಳ್ಳಾಗಡ್ಡಿವಾಡಿ, ಯಕ್ಸಂಬ, ಮಲ್ಲಿಕ್ವಾಡ್, ಬೈನಕವಾಡಿ, ನೇಜ್, ಭೋಜ,  ಶಮನೆವಾಡಿ ಕಾರದಗಾ  ಬೋರ್ಗಾವ್ ದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿರುವ ಸರ್ಕಾರಿ,  ಅರೆ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ ಪ್ರತಿದಿನ ಕೆಎಸ್ಆರ್‌ಟಿಸಿ ಬಸ್ ಗಳ ಮೂಲಕವೇ ಬರುತ್ತಾರೆ.

promotions
ಎಲ್‌ಕೆಜಿಯಿಂದ ಹಿಡಿದು ಡಿಗ್ರಿ ಕಾಲೇಜ ವರೆಗೂ ಬಸ್‌ಗಳನ್ನೇ ಆಶ್ರಯಿಸಿಕೊಂಡು ಬರುವ ಮಕ್ಕಳು ಸಂಜೆಯಾದರೆ ಸಾಕು ಮನೆಗೆ ತೆರಳಲು ಹರಸಾಹಸ ಪಡುವ ಸ್ಥಿತಿ ಸರ್ವೇಸಾಮಾನ್ಯವಾಗಿದೆ. ನಾಲ್ಕು ಗಂಟೆಯ ನಂತರ ಸದಲಗ ಮಾರ್ಗವಾಗಿ ತೆರಳುವ ಯಾವುದೇ ಕನಿಷ್ಠ ಒಂದು ಬಸ್ ಇಲ್ಲದ ಕಾರಣ ಪ್ರತಿದಿನ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

Read More Articles