ಶಿವರಾಜ ತಂಗಡಿ ಅವರ 53ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
- Shivaraj Bandigi
- 15 Jan 2024 , 3:25 AM
- Koppal
- 433
ಗಂಗಾವತಿ : ಶಿವರಾಜ ತಂಗಡಿ ರವರ ಹುಟ್ಟುಹಬ್ಬ ಅಂಗವಾಗಿ ಶಿವರಾಜ ತಂಗಡಗಿ ಅಭಿಮಾನಿ ಬಳಗ ವತಿಯಿಂದ ಗಂಗಾವತಿ ಸರಕಾರಿ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಬ್ರೆಡ್ ಹಾಲು ಹಣ್ಣು ಹಂಪಲು ವಿತರಣೆ ಮಾಡುವುದರ ಮೂಲಕ ಶಿವರಾಜ್ ತಂಗಡಗಿ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ ನಂತರ ಸಿ ಕೆ ಮರಿಸ್ವಾಮಿ ಡಿಎಸ್ಎಸ್ ಜಿಲ್ಲಾಧ್ಯಕ್ಷರು ಮಾತನಾಡಿ .

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಮಾಡುವುದಕ್ಕಿಂತ ಮುಂಚೆ ಸಾರ್ವಜನಿಕರು ಮದ್ಯ ಬೆರೆತು ಜನರ ಕಷ್ಟ ನಷ್ಟಗಳನ್ನು ಅರಿತು 2008 ರಲ್ಲಿ ರಾಜಿಕೀಯ ಪ್ರವೇಶ ಪಡೆದ ಅಂದಿನಿಂದ ಹಿಂದಿನವರೆಗೂ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿರುವಂತಹ ಸನ್ಮಾನ್ಯ ಶಿವರಾಜ ತಂಗಡಿ ರವರ ಕಾಂಗ್ರೆಸ್ ಪಕ್ಷದಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ಮತ್ತು ಸಚಿವರಾಗಿ ಈಗ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಮ್ಮ ನಿಮ್ಮೆಲ್ಲರ ಸತತವಾಗಿ ಸೇವೆ ಮಾಡುತ್ತಿದ್ದಾರೆ ಅಂತಹ ಸರಳ ಸಜ್ಜನ ವ್ಯಕ್ತಿ ಅಭಿವೃದ್ಧಿಯ ಹರಿಕಾರ ಬಡವರ ಬಂಧು ದೀನ ದಲಿತರ ನಾಯಕ ಯುವಕರ ಹೃದಯವಂತ ಬಡವರು ಮತ್ತು ಬಲ್ಲಿದರು .

ಯಾವುದೇ ರೀತಿಯ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು ಬಂದರೆ ಸಾಕು ಅಂಥವರಿಗೆ ಕೂಡಲೇ ಸ್ಪಂದಿಸಿ ಅವರಿಗೆ ಸಹಾಯ ಮಾಡುವ ಸಮೃದ್ಧಿ ಮನಸುಳ್ಳಂತಹ ವ್ಯಕ್ತಿ ಅಂದರೆ ಅದು ಶಿವರಾಜ ತಂಗಡಿ ಸಾಹೇಬ್ರೆ ಇವತ್ತು ಅವರ ಹುಟ್ಟುಹಬ್ಬವನ್ನು ಸರಳವಾಗಿ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ವತಿಯಿಂದ ಸರಳವಾಗಿ ಬಡ ಮಕ್ಕಳಿಗೆ ಪುಸ್ತಕ ನೋಟ್ ಬುಕ್ ಪೆನ್ .
ಈ ರೀತಿಯಾಗಿ ಸರಳ ರೀತಿಯಲ್ಲಿ ಆಚರಣೆ ಮಾಡಿರಿ ಮತ್ತು ಯಾವುದೇ ಕಾರಣಕ್ಕೂ ಅದ್ದೂರಿ ಆಡಂಬರದಿಂದ ಆಚರಣೆ ಮಾಡೋಕೂಡದು ಎಂದು ಕರೆಯನ್ನು ನೀಡಿದರೆ ಅವರು ಹೇಳಿದ ಹಾಗೆ ಶಿವರಾಜ ತಂಗಡಿ ಅವರ ಹುಟ್ಟುಹಬ್ಬವನ್ನು ಗಂಗಾವತಿ ಸರ್ಕಾರ ಆಸ್ಪತ್ರೆಯಲ್ಲಿ ಅವರ ಅಭಿಮಾನಿ ಬಳಗ ವತಿಯಿಂದ ಸರಳವಾಗಿ ಬಡ ರೋಗಿಗಳಿಗೆ ಸರಕಾರ ಆಸ್ಪತ್ರೆಯಲ್ಲಿ ಅಣ್ಣ ಹಂಪಲು ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಯುವ ಮುಖಂಡರಾದ ರಿಜ್ವಾನ್ ಪಾಷಾ. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆಜ್ಜಗರ್ ಅಲಿ, ಶಿವರಾಜ್,ನಜೀರ್ ಖಾನ್,ಸೋಮಪ್ಪ ಭೋವಿ,ಅಜ್ಜಗರ್,ಸೇರಿದಂತೆ ಇತರರು ಇದ್ದರು.










