ಒಂದು ಸಮಯದಲ್ಲಿ ಕನ್ನಡ ಶಾಲು ಹಾಕಲಿಕೆ ಬಿಡತಾ ಇರಲಿಲ್ಲ: ಶ್ರೀನಿವಾಸ ತಾಳೂರಕರ

ಬೆಳಗಾವಿ:ಬೆಳಗಾವಿಯಲ್ಲಿ ಸಂಭ್ರಮ ಅಂದರೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಎಲ್ಲಿಲ್ಲದ ಸಂಭ್ರಮ ಹೀಗಾಗಿ ಒಂದು ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರೆ ಕನ್ನಡ ಭಾವುಟದ ಶಾಲು ಹಾಕಲು ಅವಕಾಶ ಇರಲಿಲ್ಲ ಹಾಗೇ ನಗರದ ಒಳಗಡೆ ಬಂದರೆ ಕಲ್ಲೇಟು ಹಾಕುತ್ತಾರೆ ಎನ್ನುವ ಮಾತು ಇತ್ತು ಆದರೆ ನಾನೆ ಸ್ವತ್ಃ ಕನ್ನಡ ಬಾವುಟ ಶಾಲನ್ನ ಹಾಕಿಕೊಂಡು ಬಂದಿದ್ದೆ.ಹಾಗೇಯೆ ಸಾಕಷ್ಟು ಕನ್ನಡದ ಸಲುವಾಗಿ ಹೋರಾಟಗಳನ್ನ ಕೂಡಾ ಮಾಡಿದ್ದೇನೆ.

promotions

ನಗರದಲ್ಲಿ ಲೋಕಲ್ ವ್ಹೀವ್ ಜೊತೆ ಮಾತನಾಡಿದ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಅವರು ಕನ್ನಡದ ಅಭಿಮಾನಿಯಾಗಿ ನಾನು ಬೆಳಗಾವಿ ನಮ್ಮ ರಾಜ್ಯದ ಹೃದಯಬಾಗ ಇದ್ದ ಹಾಗೇ ಆದ್ದರಿಂದ ಸುವರ್ಣ ಸೌಧದ ಮುಂದೆ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿ ಮತ್ತು ಮಹಾನಗರ ಪಾಲಿಕೆ ಮುಂದೆ ಕೂಡಾ ಕನ್ನಡ ಭಾವುಟ ಹಾರಿಸಿದ್ದೇವೆ ಈಗಲೂ ಕೂಡಾ ಹಾರಾಡುತ್ತಿವೆ ಇದರಿಂದ ಕನ್ನಡ ರಾಜ್ಯೋತ್ಸವ ಬೆಳಗಾವಿಯಲ್ಲಿ ಇದ್ದ ಸಂಭ್ರಮ ಮತ್ತೆಲ್ಲಿಯೂ ಕೂಡಾ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಹಾಗಾಗಿ ನಾಳೆ ಕನ್ನಡ ಅಭಿಮಾನಿಗಳು ಕೂಡಾ ಬೆಳಗಾವಿ ನಗರಕ್ಕೆ ಬಂದು ಸಂಭ್ರಮದಿಂದ ಆಚರಿಸಲು ಶ್ರೀನಿವಾಸ ತಾಳೂರಕರ ಮನವಿ ಮಾಡಿಕೊಂಡರು.

promotions

ನಂತರ ಬಾವುಟ ಖರೀದಿಸಲು ಬೆಳಗಾವಿಗೆ ಬಂದ ಎಲ್ಲರಿಗೂ ಕೂಡಾ ಕಡಿಮೆ ದರದಲ್ಲಿ ಬಾವುಟ ನೀಡುವ ಕೆಲಸವನ್ನ ಕೂಡಾ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಶ್ರೀನಿವಾಸ ತಾಳೂರಕರ.

Read More Articles