ವಾರ್ಕರಿ ಭವನಕ್ಕೆ ಒಂದು ಕೋಟಿ ರೂ.: ಭೂಮಿ ಪೂಜೆ ನೆರವೇರಿಸಿದ ಲಕ್ಷ್ಮೀ ಹೆಬ್ಬಾಳಕರ್
- Shivaraj Bandigi
- 3 Jan 2024 , 9:23 PM
- Belagavi
- 221
ಬೆಳಗಾವಿ: ಬಸುರ್ತೆ ಗ್ರಾಮದಲ್ಲಿ ನೂತನ ಶ್ರೀ ವಿಠ್ಠಲ ರುಕ್ಮಿಣಿ ವಾರ್ಕರಿ ಭವನ ನಿರ್ಮಾಣಕ್ಕಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಪ್ರಯತ್ನ ಮಾಡಿ ಒಂದು ಕೋಟಿ ರೂ,ಗಳನ್ನು ಮಂಜೂರು ಮಾಡಿಸಿದ್ದಾರೆ. ಬುಧವಾರ ಭವನಕ್ಕೆ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.

ಮೊದಲನೇ ಕಂತಿನಲ್ಲಿ 25 ಲಕ್ಷ ರೂ, ಬಿಡುಗಡೆಯಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚಿಸಿದರು. ಅತ್ಯಂತ ಸುಂದರವಾಗಿ ಕಟ್ಟಡ ನಿರ್ಮಾಣ ಮಾಡಬೇಕು. ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆಯಾಗಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ರವಳು ಕಣಬರ್ಕರ್, ಬಾಹುರಾವ್ ತೆರಸೆ, ಯಾದವ ಕಾಂಬಳೆ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಜಾಧವ್, ಯೋಗಿತಾ ದೇಸಾಯಿ, ಎನ್ ಓ ಚೌಗುಲೆ, ಎಲ್ ಡಿ ಚೌಗುಲೆ, ವೈಶಾಲಿ ಖಂಡೇಕರ್, ಮಥುರಾ ತೆರಸೆ, ನಿರ್ಮಲಾ ಕಲಕಾಂಬ್ಕರ್, ಜಾವೇದ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.










