ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಒಂದು ವರ್ಷ: ಶುಭ ಕೋರಿದ ಮಹೇಶ ಶಿಗೀಹಳ್ಳಿ
- krishna shinde
- 14 Jan 2024 , 6:38 AM
- Belagavi
- 617
ಬೆಳಗಾವಿ: ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಜನಾರ್ಧನ ರೆಡ್ಡಿ ಅವರು ಕಳೆದ ವರ್ಷ ಘೋಷಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಇಂದು ತನ್ನ ಒಂದು ವರ್ಷದ ಪೂರ್ತಿಗೊಂಡಿದೆ,ಈ ಶುಭ ಸಂದರ್ಭದಲ್ಲಿ, ಪಕ್ಷದ ಅಧ್ಯಕ್ಷ ಜನಾರ್ಧನ ರೆಡ್ಡಿ ಅವರು ಸಮಸ್ತ ಕನ್ನಡ ನಾಡಿನ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಶ್ವಗುರು ಬಸವಣ್ಣನವರ ಹಾದಿಯಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಸಾಲಿನೊಂದಿಗೆ ಸ್ಥಾಪನೆಯಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಪಕ್ಷವನ್ನು ಸಂಘಟಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ಪಕ್ಷದ ಏಳಿಗೆಗಾಗಿ ಮತ ನೀಡಿದ ಮತದಾರರು, ಪ್ರೋತ್ಸಾಹ ನೀಡುತ್ತಿರುವ ಸಮಸ್ತ ಕನ್ನಡ ನಾಡಿನ ಜನತೆ, ಮಾಧ್ಯಮ ಸ್ನೇಹಿತರು, ಎಲ್ಲಾ ಮಾರ್ಗದರ್ಶಕರಿಗೆ ಜನಾರ್ಧನ ರೆಡ್ಡಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಬೆಳಗಾವಿಯ ಯುವ ರಾಜಕಾರಣಿ ಮಹೇಶ ಶಿಗೀಹಳ್ಳಿಅವರು ಕೂಡಾ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಏಳಿಗೆಗಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಒಂದು ವರ್ಷದ ಈ ಯಶಸ್ಸು, ಜನಾರ್ಧನ ರೆಡ್ಡಿ ಅವರಿಗೆ ರಾಜಕೀಯದಲ್ಲಿ ಹೊಸ ಭರವಸೆಯನ್ನು ನೀಡಿದೆ. ಈ ಭರವಸೆಯನ್ನು ಕಾಪಾಡಿಕೊಳ್ಳಲು ಮತ್ತು ಪಕ್ಷವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಶ್ರಮಿಸುತ್ತಾರೆ ಎಂದು ಮಹೇಶ ಶೀಗಿಹಳ್ಳಿ ಹೇಳಿದ್ದಾರೆ.










