ವೈಜ್ಞಾನಿಕತೆ ವೈಚಾರಿಕತೆ ಬೆಳೆದಾಗ ಮಾತ್ರ ಕಲಿತ ವಿದ್ಯೆಗೆ ಬೆಲೆ ಬರುತ್ತದೆ : ಸಿಎಂ ಸಿದ್ದರಾಮಯ್ಯ

ಮೈಸೂರು : ವೈಜ್ಞಾನಿಕತೆ ವೈಚಾರಿಕತೆ ಬೆಳೆದಾಗ ಮಾತ್ರ ಕಲಿತ ವಿದ್ಯೆಗೆ ಬೆಲೆ ಬರುತ್ತದೆ.ಇದನ್ನು  ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

promotions

ಅವರು ಇಂದು ಸ್ವಾಮಿ ವಿವೇಕಾನಂದ ಎಜುಕೇಶನಲ್ ಇನ್ಸ್ಟಿಟ್ಯೂಟ್  ವಿದ್ಯಾಸಂಸ್ಥೆಯ  ರಜತ ಮಹೋತ್ಸವ ಹಾಗೂ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

promotions

20 ವರ್ಷಗಳ ಹಿಂದೆ ಈ ಶಾಲೆಯ ಉದ್ಘಾಟನೆ ಮಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದು ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿ.  ಬೆಳವಾಡಿ ಭಾಗದಲ್ಲಿನ ಬಹುತೇಕ ಮಕ್ಕಳು ಹಳ್ಳಿಗಾಡಿನಿಂದ ಬಂದಿರುವವರು. ಅವರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಸಮಾಜದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಅವರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು. 

ವೈಜ್ಞಾನಿಕವಾಗಿಚಿಂತನೆಮಾಡುವಶಕ್ತಿಅಗತ್ಯ :

ಪ್ರತಿಯೊಬ್ಬರೂ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳಸಬೇಕು. ಸಮಾಜಲ್ಲಿ 850 ವರ್ಷಗಳ ಹಿಂದೆಯೇ ಮೌಢ್ಯಗಳನ್ನು ಬಿಟ್ಟು ವಿಚಾರವಂತಿಕೆ ಬೆಳೆಸಿಕೊಳ್ಳಬೇಕು ಎಂದು ಬಸವಾದಿ ಶರಣರು ಸಾರಿದ್ದರು. ಶಿಕ್ಷಿತರಾದ ಮೇಲೆ ವೈಜ್ಞಾನಿಕವಾಗಿ ಚಿಂತನೆ ಮಾಡುವ ಶಕ್ತಿ ಅಗತ್ಯ. ಉನ್ನತ ಶಿಕ್ಷಣ ಪಡೆದೂ ಕಂದಾಚಾರಗಳಿಗೆ ಜೋತು ಬಿದ್ದರೆ, ಶಿಕ್ಷಣ ಎಂದು ಹೇಳಾಗದು. ಸಮಾಜದ ಜೊತೆಗೆ ಸ್ಪಂದಿಸುವ ಜ್ಞಾನವಿರಬೇಕು. ಆಗ ಮಾತ್ರ ಅವರನ್ನು ಸುಶಿಕ್ಷಿತರು ಎಂದು ಕರೆಯಬಹುದು ಎಂದರು.

ಸಮಸ್ಯೆಗಳನ್ನುಪರಿಹಾರಮಾಡುವ  ಶಕ್ತಿವಿದ್ಯಾರ್ಥಿಗಳಿಗೆಬರಬೇಕು :

ಬರೀ ಓದು ಬರೆಯಲು ಮಾತ್ರವಲ್ಲದೆ ಸಾಮಾಜಿಕ ವ್ಯಕ್ತಿ ಯಾಗಿ ಸಮಾಜದ ಜವಾಬ್ದಾರಿಯನ್ನು ಹೊರುವ, ಸಮಸ್ಯೆಗಳನ್ನು ಪರಿಹಾರ ಮಾಡುವ  ಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಮಕ್ಕಳಿಗೆ ವೈಚಾರಿಕತೆ ತುಂಬಿ ಬೆಳಸಬೇಕು ಎನ್ನುವುದನ್ನು ಪ್ರತಿಯೊಬ್ಬ ಗುರುಗಳು ಬೆಳೆಸಿಕೊಳ್ಳಬೇಕು. ಶಿಕ್ಷಕರಲ್ಲಿ ವೈಚಾರಿಕತೆ ಬಂದರೆ ಮಕ್ಕಳಿಗೆ ಕೂಡ ಅದು ಬರಲು ಸಾಧ್ಯ. ಕೇವಲ ಇಂಗ್ಲಿಷ್ ನಲ್ಲಿ ಮಾತನಾಡಿದರೆ ಅದು ಶಿಕ್ಷಣವಲ್ಲ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಕನ್ನಡಮಾಧ್ಯಮದಲ್ಲಿಕಲಿಯಬೇಕು :

ಗುರುದೇವೋಭವ ಎಂದು ಕರೆಯಲ್ಪಡುವ ಶಿಕ್ಷಕರು, ರೈತರು ಹಾಗೂ ಸೈನಿಕರನ್ನು ಹೆಚ್ಚು ಗೌರವ ದಿಂದ ಕಾಣುತ್ತೇವೆ. ತಂದೆತಾಯಿಗಳ ಮೇಲೂ ಶಿಕ್ಷಣ ನೀಡುವ ಹೊಣೆಯಿದೆ.  ಇಂಗ್ಲಿಷ್ ಕಲಿಯಬೇಕು, ಆದರೆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೆಚ್ಚು ಸುಲಭವಾಗಿ ಅರ್ಥವಾಗುತ್ತದೆ ಎಂದರು. 

ಎಲ್ಲಾಮಕ್ಕಳಿಗೂಶಿಕ್ಷಣಕಡ್ಡಾಯ

ನಮ್ಮಕ್ಷೇತ್ರದ ಮಕ್ಕಳು ವಿದ್ಯಾವಂತರಾದರೆ ಅದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ. 
14 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯ ಹಾಗೂ ಅದು ಮೂಲ ಭೂತ ಹಕ್ಕು ಎಂದರು.ನೂರಕ್ಕೆ ನೂರರಷ್ಟು ಮಕ್ಕಳು ವಿದ್ಯಾವಂತರಾಗಬೇಕು. ದೇಶದಲ್ಲಿ ಕೇವಲ 76 % ಮಾತ್ರ ವಿದ್ಯಾವಂತರಿದ್ದಾರೆ . 75 ವರ್ಷಗಳಾದರೂ ಎಲ್ಲರೂ ಶಿಕ್ಷಣ ಪಡೆದಿಲ್ಲ ಎಂದರು. 

ಸಾರ್ವತ್ರಿಕಮೂಲಆದಾಯದಆಧಾರದಲ್ಲಿಯೋಜನೆಗಳು

ನಮ್ಮ ಸರ್ಕಾರ ಬಂದ ಮೇಲೆ ಮನೆ ಮನೆಗೆ ಅನೇಕ ಕಾರ್ಯಕ್ರಮ ಗಳನ್ನು ನೀಡಿದೆ. ಉಚಿತ ವಿದ್ಯುತ್, 2000 ಸಾವಿರ ರೂ. 5 ಕೆಜಿ ಹೆಚ್ಚು ಅಕ್ಕಿ, ಅನ್ನಭಾಗ್ಯ ಯೋಜನೆಗಳನ್ನು ಬಡವರಿಗೆ ನೀಡುವುದು ಖರ್ಚು ಮಾಡುವ ಶಕ್ತಿ ಬರಲಿ ಎಂದು ನೀಡಲಾಗುತ್ತಿದೆ. ಸಾರ್ವತ್ರಿಕ ಮೂಲ ಆದಾಯದ ಆಧಾರದಲ್ಲಿ ಈ ಯೋಜನೆಗಳು ಜಾರಿಯಾಗಿವೆ ಎಂದರು.

Read More Articles