24ನೇ ದಿನಕ್ಕೆ ಕಾಲಿಟ್ಟ ಆಪರೇಷನ್ ಚಿತಾ

ಬೆಳಗಾವಿ : ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಮುಂದೊರೆದ ಆಪರೇಷನ್ ಚಿರತೆ. 24 ನೇ ದಿನಕ್ಕೆ ಕಾಲಿಟ್ಟ ಚಾಲಾಕಿ‌ ಚಿರತೆ ಆಪರೇಷನ್. ಅರಣ್ಯ ಸಿಬ್ಬಂದಿಗೆ ಪದೇ ಪದೇ ಕಾಣಿಸಿಕೊಂಡು ಕೈಗೆ ಸಿಗದ ಚಿರತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ.

promotions

5ನೇ ದಿನಕ್ಕೆ ಕಾಲಿಟ್ಟ ಎರಡು ಆನೆಗಳ ಕಾರ್ಯಾಚರಣೆಗೂ ಚಿರತೆ‌ ಪ್ರತ್ಯೆಕ್ಷವಾಗಿರಲಿಲ್ಲ. ಶನಿವಾರದ ಕಾರ್ಯಾಚರಣೆಗೆ ಮಳೆಯಿಂದ ಅಡ್ಡಿಯಾಯಿತು.

promotions

ಇನ್ನೂ ಮೂರು ದಿನ ಬೆಳಗಾವಿ ಜಿಲ್ಲೆಯಲ್ಲಿ ಯಲೋ ಅರ್ಲಟ್ ಘೋಷಣೆಯಾಗಿದ್ದು, ಮಳೆ ನೋಡಿಕೊಂಡು ಫೀಲ್ಡ್ ಗೆ ಇಳಿಯಲಿರುವ ಸಿಬ್ಬಂದಿ.‌ ಟ್ರ್ಯಾಪ್ ಕ್ಯಾಮೆರಾ, ಬಲೆ ಹಾಕಿ, ಜೆಸಿಬಿಗಳನ್ನ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಗಾಲ್ಫ್ ಮೈದಾನದ ಒಳಗೂ ಹೊರಗೂ ನಿರಂತರವಾಗಿ ಗಸ್ತು ಹೊಡೆಯುತ್ತಿರುವ ಸಿಬ್ಬಂದಿಗಳ, ಬೆಳಗಾವಿ ಜನರ ನಿದ್ದೆಗೆಡಿಸಿದ ಚಿರತೆ ಭಯದ ವಾತಾವರಣ ನಿರ್ಮಾಣವಾಗಿದೆ.

ದಟ್ಟ ಗಿಡಗಂಟಿಗಳಲ್ಲಿ ಅವಿತ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಪರದಾಟ ನಡೆಸಿದ್ದಾರೆ.ಹೆಜ್ಜೆ ಗುರುತು ಆಧರಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Read More Articles