ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಸಿಗಲಿದೆ ಆದೇಶ ಇಂದು ಹೊರಬರಲಿದೆ : ಆರ್ ಅಶೋಕ್
- 14 Jan 2024 , 10:21 PM
- Belagavi
- 215
ಬೆಳಗಾವಿ :ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ವಿಚಾರ ನಿನ್ನೆ ರಾತ್ರಿ ಸಿಎಂ ನಾಲ್ಕು ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ನಮ್ಮ ಸಿಎಂ ಬಹಳ ಜಾಣರಿದ್ದಾರೆ,ಯಾವ ಸಮಯದಲ್ಲಿ ಯಾರಿಗೆ ಮೀಸಲಾತಿ ಕೋಡಬೇಕು ಅನ್ನುವುದು ಅವರಿಗೆ ಗೊತ್ತಿದೆ ಸದ್ಯದಲ್ಲೆ ಸಿಹಿ ಸುದ್ದಿ ಕೊಡ್ತಾರೆ ಎಂದು ಹೇಳಿದ್ದಾರೆ.

ನಮ್ಮ ಸಿ ಎಂ ಯಾವಾಗಲೂ ಸಕಾರಾತ್ಮಕವಾಗಿ ಯೋಚನೆ ಮಾಡ್ತಿದ್ದಾರೆ ಎಲ್ಲ ಸಮುದಾಯದ ಕುರಿತು ಕಾನೂನಾತ್ಮಕವಾಗಿ ಪರಿಗಣನೆಗೆ ತೆಗೆದುಕೊಂಡು ನಿರ್ಧಾರ ಮಾಡ್ತಾರೆ.
Sc st ಮೀಸಲಾತಿ ಹೆಚ್ಚಳ ಮಾಡಿದ್ರು ಯಾರೂ ಸಹ ಇಷ್ಟು ಧೈರ್ಯ ಮಾಡಲ್ಲ ಎಂದು ಬೊಮ್ಮಾಯಿಯವರನ್ನು ಹೊಗಳಿದ್ದಾರೆ.
ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಸಿಗಲಿದೆ ನಾನು ಸಹ ಸಿ ಎಂ ಗೆ ಎಲ್ಲವನ್ನೂ ಹೇಳಿದ್ದೆನೆ ಒಕ್ಕಲಿಗ ಸಮುದಾಯದ ಕುರಿತು ಆದೇಶ ಇಂದು ಹೊರಬರಲಿದೆ ಎಂದು ಹೇಳಿದ್ದಾರೆ.
ಕೋವಿಡ್ ೧೯ ಸಭೆ ಕುರಿತು ಶನಿವಾರ ಕೋವಿಡ್ ಮೀಟಿಂಗ್ ಕರೆಯುತ್ತೆವೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ ನೇತೃತ್ವದಲ್ಲಿ ಸಭೆ ಮಾಡ್ತಿವಿ ಎಂದು ಹೇಳಿದ್ದಾರೆ.










