ನೇಕಾರರ ವಿವಿಧ ಬೇಡಿಕೆಗಾಗಿ ಬನಹಟ್ಟಿಯಿಂದ ಹುಬ್ಬಳ್ಳಿವರೆಗೆ ಪಾದಯಾತ್ರೆ. ಶಿಲಿಂಗ ಟಿರಕಿ

ಬೆಳಗಾವಿ : ವೃತ್ತಿಪರರ ನೇಕಾರರ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಮತ್ತು ವಿದ್ಯುತ್ ಚಾಲಿತ ಮಗ್ಗದ ನೇಕಾರರ ಬಾಕಿ ವಿದ್ಯುತ್ ಬಿಲ್ ಸಂಬಂಧಿತ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಒತ್ತಾಯಿಸಿ, ನೇಕಾರರ ಆತ್ಮಹತ್ಯೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದನ್ನು ಖಂಡಿಸಿ, ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವದು ಎಂದು ರಾಜ್ಯ ನೇಕಾಕರರ ಸೇವೆ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು. 

promotions

ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೂಡ ವೃತ್ತಿಪರ ನೇಕಾರರನ್ನು ನಿರ್ಲಕ್ಷಿಸುತ್ತಾರೆ. ಈಗಲೂ ಕೂಡ ಜವಳಿ ಸಚಿವರು ನೇಕಾರರ ಪಾಲಿಗೆ ಇದ್ದು ಇಲ್ಲದಂತಾಗಿದ್ದಾರೆ. ನೇಕಾರರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಹಿಂದುಳಿದವರಾಗಿದ್ದಾರೆ ಇವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಿಸಿಕೊಂಡು ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. 

promotions

ಸತತ ಬಿದಿಗೆ ಇಳಿದು ಹೋರಾಟ ಮಾಡುತ್ತಿರುವ ನಮಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಶಾಶ್ವತ ಪರಿಹಾರಕ್ಕಾಗಿ ನಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಬೇಕು. ಇಲ್ಲವಾದರೇ ಬೃಹತ ಹೋರಾಟದ ಮೂಲಕ ಬೆಂಗಳೂರು ಚಲೋ ಕರೆ ನೀಡಲಾಗುವುದು ಎಂದರು. 

1] ಕಳೆದ ಏಪ್ರೀಲ್ 1 ರಿಂದ ಹೆಚ್ಚುವರಿಯಾಗಿರುವ ವಿದ್ಯುತ್ ಬಾಕಿ ಬಿಲ್ ಕೆಲವರು ತುಂಬಲು ಆಗದೇ ಇರುವ ಕಾರಣ ಸರ್ಕಾರವೇ ಭರಿಸಿಕೊಳ್ಳಬೇಕು. ಇಲ್ಲವಾದರೆ ಕೇವಲ ಯಾವುದೇ ಜಾರ್ಜಗಳನ್ನು ವಿಧಿಸದೇ ಪ್ರತಿ ಯೂನಿಟ್‌ಗೆ 1.25 ಪೈಸೆಯಂತೆ ಕಂತುಗಳ ಮೂಲಕ ಬಾಕಿ ಬಿಲ್‌ನ್ನು ಭರಿಸಿಕೊಳ್ಳಬೇಕು. ಸರ್ಕಾರದ ವಿಳಂಬ ನೀತಿಯಿಂದ ಈ ಸಮಸ್ಯೆಗೆ ಸರ್ಕಾರವೇ ಹೊಣೆ ಹೊತ್ತುಕೊಳ್ಳಬೇಕು.

2) ರಾಜ್ಯದ ಕೆ.ಹೆಚ್.ಡಿ.ಸಿ. ನಿಗಮದಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರವಾಗಿದ್ದು ಅದನ್ನು ತನಿಖೆ ತೀವ್ರಗೊಳಿಸಿ ತಪ್ಪಿತಸ್ತಿರಿಗೆ ಶಿಕ್ಷೆಗೆ ಗುರಿಪಡಿಸಬೇಕು. ಕಳಪೆ ಬಟ್ಟೆ ಪೂರೈಸಿ ನಡೆದಿರುವೆ ಈ ಅವ್ಯವಹಾರ ಹಣವನ್ನು ನಿಗಮಕ್ಕೆ ಮರಳಿ ವಸೂಲಾತಿ ಮಾಡಬೇಕು. ಮತ್ತು ನಿಗಮದಲ್ಲಿ ಅನೇಕ ವರ್ಷಗಳಿಂದ ನೇಕಾರಿಕೆ ಮಾಡುತ್ತಿರುವ ನೇಕಾರರಿಗೆ ನಿವೇಶನಗಳು ಇಲ್ಲ, ನಿವೇಶನಗಳು ಇದ್ದವರಿಗೆ ಸಿ.ಟಿ.ಎಸ್.ಉತಾರಗಳಿಲ್ಲ ಇದರಿಂದಾಗಿ ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಪ್ರಾರಂಭದಲ್ಲಿ 48 ಸಾವಿರ ನೇಕಾರರು ಇದ್ದವರು ಈಗ ಕೇವಲ 4 ಸಾವಿರ ಮಾತ್ರ ನೇಕಾರರು ಉಳಿದಿದ್ದಾರೆ. ನಿಗಮವು ಕೂಡ ನೂರಾರು ಕೋಟಿ ರೂಪಾಯಿಗಳ ಸಾಲದಲ್ಲಿ ನಡೆಯುತ್ತಿದೆ. ಇದನ್ನು ಸರಿಪಡಿಸಿ ಸರ್ಕಾರ ನಿಗಮವನ್ನು ಮನಕ್ಷೇತನಗೊಳಿಸಬೇಕ.

3] ಸಾಲದ ಹೊರೆಯಿಂದ ರಾಜ್ಯದಲ್ಲಿ 51 ಜನರು ಆತ್ಮಹತ್ಯೆಗೆ ಒಳಗಾಗಿದ್ದು ಸಾಲದ ಕಿರುಕುಳ ತಾಳಲಾರದೇ ಈ ಘಟನೆಗಳು ನಡೆಯುತ್ತಿವೆ. ಸರ್ಕಾರಗಳು ಇದನ್ನು ನಿಲ್ಲಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನೊಳಗೊಂಡಂತೆ ಒಂದು ಬಾರಿ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಆತ್ಮಹತ್ಯೆಗೆ ಒಳಗಾದ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಒದಗಿಸಬೇಕು.

4] ಕೇಂದ್ರ ಸರ್ಕಾರ 2024-25 ರ ಜವಳಿ ನೀತಿಯನ್ನು ಮಾಡುತ್ತಿದ್ದು ಜವಳಿ ನೀತಿಯಲ್ಲಿ ಕಟ್ಟಕಡೆಯ ನೇಕಾರರಿಗೆ ಅನುಕೂಲವಾಗುವ ಸೌಲಭ್ಯಗಳನ್ನೊಳಗೊಂಡು ಕೈಮಗ್ಗ ಮತ್ತು ಜವಳಿ ಇಲಾಖೆಗೆ 'ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಒದಗಿಸಬೇಕು. ಮತ್ತು ಕೇಂದ್ರದಿಂದ ಕಿಸಾನ್ ಸಮ್ಮಾನ್ ಆ ಮಾದರಿಯಲ್ಲಿ ನೇಕಾರ (ಬುನಕರ್) ಸಮ್ಮಾನ್ ಯೋಜನೆಯನ್ನು ಜಾರಿ ಮಾಡಬೇಕು. ಕಟ್ಟಡ ಕಾರ್ಮಿಕ ಮಾದರಿಯಂತೆ ನೇಕಾರರಿಗೂ ಕಾರ್ಮಿಕ ಸೌಲಭ್ಯಗಳನ್ನು ಒದಗಿಸಿ ನೇಕಾರ ಮತ್ತು ನೇಕಾರಿಕೆಯನ್ನು ಉಳಿಸಬೇಕು. ನೇಕಾರಿಕೆ ಈ ದೇಶದ ಅದ್ಭುತ ಸಂಸ್ಕೃತಿಯಾಗಿದ್ದು ಇದರ ಬಗ್ಗೆ ಸರ್ಕಾರಗಳು ಗಮನಹರಿಸಬೇಕು.

5] ನೇಕಾರರಿಗೆ ಸಂಬಂಧಪಟ್ಟ ಇಲಾಖೆಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಸರ್ಕಾರದಿಂದ ನೇಕಾರರಿಗೆ ಅನ್ಯಾಯವಾಗುತ್ತಿದ್ದು ಯಾವುದೇ ಯೋಜನೆಗಳು ಕೂಡ ದೊರೆಯದೆ ಭಷ್ಟಾಚಾರ ವ್ಯಸಗುತ್ತಿದ್ದಾರೆ. ಸರ್ಕಾಕ್ಕೆ ತಪ್ಪು ಮಾಹಿತಿ ಅಂಕಿ-ಸಂಖ್ಯೆಗಳ ಮುಖೇನ ಪ್ರಾಮಾಣಿಕರಿಗೆ ಸೌಲಭ್ಯ ಒದಗಿಸದೇ ಸರ್ಕಾರದ ಅನುದಾನದ ಹಣವನ್ನು ದುರರ್ಬಳಕೆ ಮಾಡುತ್ತಿದ್ದಾರೆ. ಕೂಡಲೇ ಸಹಕಾರಿ ಸಂಘ-ಸಂಸ್ಥೆಗಳ ಮೇಲೆ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದರು. 

ಸರ್ಕಾರ ಕೆ.ಹೆಚ್.ಡಿ.ಸಿ. ನಿಗಮದಲ್ಲಿ ಆಗಿರುವ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರದ ಬಗ್ಗೆ, ನೇಕಾರರ ಆತ್ಮಹತ್ಯೆಗಳ ಬಗ್ಗೆ, ಬಾಕಿ ವಿದ್ಯುತ್ ಬಿಲ್‌ನ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ ದಿನಾಂಕ: 13/10/2024 ರಿಂದ ಬಾಗಲಕೋಟ ಜಿಲ್ಲೆಯ ಬನಹಟ್ಟಿ ಕೆ.ಹೆಚ್.ಡಿ.ಸಿ. ಕಾಲೋನಿಯಿಂದ ಬೃಹತ್ ಪಾದಯಾತ್ರೆಯ ಮೂಲಕ ಬೆಳಗಾವಿಯ ಮಾರ್ಗವಾಗಿ ದಿನಾಂಕ: 18/10/2024 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗುವುದು. ಜವಳಿ ಸಚಿವರು, ಸಹಕಾರಿ ಸಚಿವರು, ಕಾರ್ಮಿಕ ಸಚಿವರು ಹಾಗ ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾಂದ್ಯಂತ ನೇಕಾರರನ್ನು ಜಾಗೃತಗೊಳಿಸಿ ಹತ್ತಾರು ಸಾವಿರ ನೇಕಾರರನ್ನು ಬೆಂಗಳೂರು ಚಲೋ ಮೂಲಕ ವಿಧಾನಸೌಧದ ಎದುರಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Read More Articles