ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿಗಾಗಿ ಡಿಸೆಂಬರ್ 5 ರಂದು ಬೃಹತ್ ಚಳುವಳಿ : ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ
- 14 Jan 2024 , 2:04 AM
- Bengaluru
- 254
ಡಿಸೆಂಬರ್ .5 ರಂದು ಬೈಲಹೊಂಗಲನಲ್ಲಿ ಪಂಚಮಸಾಲಿ ಹಾಗೂ ಎಲ್ಲ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಓ.ಬಿ.ಸಿ ಮೀಸಲಾತಿಗೆ ಸೇರ್ಪಡಿಸುವಂತೆ ಹಕ್ಕೊತ್ತಾಯಿಸಿ ಪಂಚ ಹತ್ತದ ಚಳುವಳಿ ಇದಾಗಿದ್ದು, ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ಒಂದೇ ಮಾರ್ಗ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಗರದ ಗಾಂಧಿ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಡಿಸೆಂಬರ್ 19 ರಂದು ಸಿ.ಎಂ.ಬೋಮ್ಮಾಯಿಯವರು ಮೀಸಲಾತಿಯನ್ನು ಘೋಷಿಸಲಿದ್ದಾರೆ ಅವರಿಗೆ ಇನ್ನೊಮ್ಮೆ ಮನವರಿಕೆ ಮಾಡಲು ಡಿಸೆಂಬರ್ 5 ರಂದು ಬೈಲಹೊಂಗಲ ತಾಲೂಕಿನಲ್ಲಿ ಲಿಂಗಾಯತ ಪಮಚಮಸಾಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.











