2D ಮೀಸಲಾತಿ ತಿರಸ್ಕರಿಸಿದ ಪಂಚಮಸಾಲಿ ಸಮಾಜ

ಬೆಳಗಾವಿ: ಸಿಎಂ ಬೋಮ್ಮಾಯಿ ಅವರು ತಾಯಿ ಮೇಲೆ ಆಣೆ ಕೊಟ್ಟು ಡಿಸೆಂಬರ್29 ರಂದು ಮೀಸಲಾತಿ ಘೋಷಣೆ ಮಾಡಿದ್ದರು. ಆ 2 ಡಿ ಮೀಸಲಾತಿ ಯನ್ನ ಪಂಚಮಸಾಲಿ ಸಮಾಜ ತಿರಸ್ಕರಿಸುತ್ತದೆ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

promotions

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ 24 ಗಂಟೆಯಲ್ಲಿ ಮೀಸಲಾತಿ ಕೊಡುರೋ ಇಲ್ಲವೋ ಎನ್ನುವುದನ್ನು ಸ್ಪಷ್ಟ ಪಡಿಸಬೇಕು ಎಂದರು.

promotions

ಇದೇ ತಿಂಗಳು ಜನವರಿ12 ರ ಒಳಗಾಗಿ ಸರ್ಕಾರ ಮೀಸಲಾತಿ ಹೊರಡಿಸಿ ಗೇಟ್ ನಲ್ಲಿ ಘೋಷಣೆ ಮಾಡಬೇಕು. ಘೋಷಣೆ ಮಾಡದಿದ್ದರೆ ಜನವರಿ 13 ರಂದು ಹಾವೇರಿಯ ಸಿಎಂ ಮನೆ ಮುಂದೆ ಒಂದು ದಿನದ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪಂಚಮಸಾಲಿ ನಡೆ ಹಾವೇರಿ ಕಡೆ ಹೋರಾಟ ಕ್ಕೆ ಸ್ವಾಮೀಜಿ ಕರೆ ನೀಡಿದರು. ಸಚಿವ ಸಂಪುಟದ ಸಭೆಯನ್ನ ನಾವು ತಿರಸ್ಕಾರ ಮಾಡುತ್ತೇವೆ. ಹಾವೇರಿಯಲ್ಲಿ 30 ರಿಂದ40 ಸಾವಿರಕ್ಕೂ ಅಧಿಕ ಜನರೊಂದಿಗೆ ಹೋರಾಟ ಮಾಡುತ್ತೇವೆ. ಅವತ್ತು ಘೋಷಣೆ ಮಾಡದಿದ್ದರೆ ಮುಂದಿನ ಹೋರಾಟವನ್ನ ಹಾವೇರಿಯಲ್ಲಿ ಘೋಷಣೆ ಮಾಡುತ್ತೇವೆ ಎಂದರು.

ಈ ಜನಶಕ್ತಿ 2023 ರ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಪಂಚಮಸಾಲಿ ಸಮಾಜ ಎಲ್ಲಾ ತೀರ್ಮಾನಕ್ಕೆ ಗಟ್ಟಿಯಾಗಿದೆ. ನಾವು 2 ಎ ಮೀಸಲಾತಿ ಯಲ್ಲಿ ಇದ್ದ ಸೌಲಭ್ಯ ಕೊಡಬೇಕು. ಈಗ ಸರ್ಕಾರದ 2 ಡಿ ಮೀಸಲಾತಿ ಗೊಂದಲ ಕ್ಕೆ ಕಾರಣವಾಗಿದೆ ಎಂದರು.

Read More Articles