ಪ್ರಧಾನಿ ಮೋದಿ ನಾಯಕತ್ವವನ್ನು ಕೊಂಡಾಡಿದ ಪಪುವಾ ಪ್ರಧಾನಿ

ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆಯ (FIPIC) ಮೂರನೇ ಶೃಂಗಸಭೆಯ ಆತಿಥ್ಯ ವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಪುವಾ ನ್ಯೂಗಿನಿಯಾದಲ್ಲಿ ವಿಶೇಷ ಸ್ವಾಗತವನ್ನು ಪಡೆದರು. ಗೌರವ ಸೂಚಕವಾಗಿ ಪಪುವಾ ಪ್ರಧಾನಿ ಜೇಮ್ಸ್ ಮರಾಪೆ ಅವರು ಪೆಸಿಫಿಕ್ ದ್ವೀಪ ರಾಷ್ಟ್ರಕ್ಕೆ ಪ್ರಧಾನಿ ಮೋದಿಯನ್ನು ಸ್ವಾಗತಿಸುವಾಗ ಅವರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿದ್ದಾರೆ.

promotions

ನಾವು ಜಾಗತಿಕ ಪವರ್‌ಪ್ಲೇಗೆ ಬಲಿಯಾಗಿದ್ದೇವೆ ,ನೀವು ಪಿಎಂ ಮೋದಿ ಗ್ಲೋಬಲ್ ಸೌತ್‌ನ ನಾಯಕರಾಗಿದ್ದೀರಿ,ಜಾಗತಿಕ ವೇದಿಕೆಗಳಲ್ಲಿ ನಿಮ್ಮ ನಾಯಕತ್ವದ ಹಿಂದೆ ನಾವು ಒಟ್ಟುಗೂಡುತ್ತೇವೆ ಎಂದು ಜೇಮ್ಸ್ ಮರಾಪೆ ಪಪುವಾ ನ್ಯೂಗಿನಿಯಾದ ಪ್ರಧಾನಿ ಹೇಳಿದ್ದಾರೆ.

Read More Articles