ಪರಪ್ಪನ ಅಗ್ರಹಾರ ಪ್ರಕರಣ "ದುಡ್ಡಿದ್ರೆ ದುನಿಯಾ" ರೋಚಕ ಕಹಾನಿ

ಬೆಳಗಾವಿ :  ಪರಪ್ಪನ ಅಗ್ರಹಾರ ತನ್ನ ಖಾಸಗಿ ರೆಸಾರ್ಟ್ ಮಾಡಿಕೊಂಡಿದ್ದ ದರ್ಶನಗೆ ಬಳ್ಳಾರಿಯ ಜೈಲಿನ ದರ್ಶನ ಕಾದಿದೆ. ಜೈಲಿನಲ್ಲಿ ಯಾವೆಲ್ಲ ಸವಲತ್ತುಗಳು ಕೈದಿಗಳಿಗೆ ಸಿಗುತ್ತೆ ಎನ್ನವದನ್ನು ಸಿನಿಮಾಗಳಲ್ಲಿ ನೋಡಿದ ಜನ ಈಗ ನೈಜವಾಗಿ ನೋಡುವ ಭಾಗ್ಯ ಸಿಕ್ಕಿದೆ. ಆರೋಪಿಗಳ ಮನ ಪರಿವರ್ತನೆ ಗಾಗಿ ಕಾರಾಗೃಹದಲ್ಲಿ ಇಟ್ಟು ಅವರು ಅಪರಾಧಿಕ ಮನೋಭಾವನೆಯಿಂದ ಹೊರಬರಲಿ ಸಮಾಜದಲ್ಲಿ ಉತ್ತಮರಾಗಿ ಬದುಕಲಿ ಎನ್ನುವ ಉದ್ದೇಶವಿರುತ್ತದೆ. 

Your Image Ad

ಆದರೆ ದರ್ಶನ ಪ್ರಕರಣದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಜೈಲಿನ‌ ಸಿಬ್ಬಂದಿ ಅಮಾನತ್ತುಗೊಂಡಿದ್ದಾರೆ. 

Your Image Ad

ಜೈಲಿನಲ್ಲಿ ಮೊಬೈಲ್, ಮಾದಕ ವಸ್ತುಗಳ ಸರಬರಾಜು ನಡೆದರೆ ಯಾವ ಆರೋಪಿ ತಾನು ಮಾಡಿದ ಅಪರಾಧಕ್ಕೆ ಪಶ್ಚಾತ್ತಾಪ ಪಡುತ್ತಾನೆ. ಇಂತಹ ಕೃತ್ಯಗಳು ಬಯಲಾದರೆ ಅಪರಾಧಿಕ ಮನಸ್ಸಿನ ವ್ಯಕ್ತಿಗಳು ಆರೋಪ ಮಾಡುವದಕ್ಕೆ ಭಯ ಬೀಳದೆ ದುಡ್ಡಿದ್ರೆ ದುನಿಯಾ ಎಂಬ ಮನಸ್ಥಿತಿಗೆ ಬಂದು ತಲುಪುದಿಲ್ಲವೇ ಎನ್ನುವ ಮಾತುಗಳು ಸಮಾಜದಲ್ಲಿ ಕೇಳಿಬರುತ್ತಿವೆ.

Your Image Ad

Your Image Ad

Read More Articles