ಹಂಪಯ್ಯ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಪರಶುರಾಮ ಕಬಾಡೆ ಒತ್ತಾಯ
- Shivaraj Bandigi
- 14 Jan 2024 , 9:48 PM
- Koppal
- 163
ಕವಿತಾಳ : ಮಾನ್ವಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಹಂಪಯ್ಯ ನಾಯಕ್ ಸಹುಕಾರ ಅವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಯುವ ಮುಖಂಡರಾದ ಪರಶುರಾಮ ಕಬಾಡೆ ಒತ್ತಾಯಿಸಿದರು.

2008 2013ರ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಎರಡನೇ ಬಾರಿ ಗೆಲುವು ಹಾಗೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಆಯ್ಕೆಯಾಗಿರುವ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಸ್ಥಳೀಯವಾಗಿ ಹಿರಿಯ ಶಾಸಕರಾಗಿರುವ ಹಂಪಯ್ಯ ನಾಯಕ ಅವರು ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನೀರಾವರಿ ಸೇರಿದಂತೆ ಸದನದಲ್ಲಿ ಈ ಭಾಗದ ಜನರಿಗೆ ನ್ಯಾಯವಾದಿಸಲು ಬದ್ಧರಾಗಿದ್ದಾರೆ.
ಈ ರಾಯಚೂರು ಭಾಗದಲ್ಲಿ ಒಮ್ಮೆ ಕೂಡ ಸ್ಥಳೀಯರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅನ್ಯ ಜಿಲ್ಲೆಯವರಿಗೆ ಆದ್ಯತೆ ನೀಡಲಾಗಿದೆ ಈ ಬಾರಿಯಾದರೂ ನಮ್ಮ ಕ್ಷೇತ್ರಕ್ಕೆ ಸ್ಥಳೀಯವಾಗಿ ಕಾಂಗ್ರೆಸ್ ಹಿರಿಯ ಶಾಸಕರಾಗಿರುವ ಹಂಪಯ್ಯ ನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕು ಅವರು ಸ್ಥಳೀಯವಾಗಿ ಪ್ರಭಾವಿ ಶಾಸಕರಾಗಿದ್ದು .
ಈ ಭಾಗದಲ್ಲಿ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯದ ಹಿರಿಯ ನಾಯಕರಿಗೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದರು.











