ರಾಜಕಾರಣಿಗಳ ನಡೆಗೆ ಜನತೆ ಕಂಗಾಲು. ದರ ಏರಿಕೆ ನೀತಿ, ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಜನಜೀವನ ದುಸ್ತರಕ್ಕೆ
- shivaraj B
- 24 Sep 2024 , 7:12 PM
- Belagavi
- 1296
ಬೆಳಗಾವಿ : ಮಹಾನಗರ ಪಾಲಿಕೆ ಗಂಭೀರ ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನುವ ಎದುರಿಸುತ್ತಿದ್ದು, ಜನರ ಮೇಲೆ ಬಿದ್ದಿರುವ ದರ ಏರಿಕೆ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯತನ ನಗರವನ್ನು ಅಸ್ಥಿರಗೊಳಿಸುತ್ತಿದೆ.

₹20 ಕೋಟಿ ರೂ. ಹಣಕಾಸಿನ ಕೊರತೆ, ಕೂಲಿ ಕಾರ್ಮಿಕರ ಪ್ರತಿಭಟನೆಗಳು, ಪ್ರಮುಖ ಯೋಜನೆಗಳ ಹೊರಡೆಗೆ ಸ್ಥಳಾಂತರ ಈ ಸ್ಥಿತಿಯಲ್ಲಿಯೂ ಸಹ ರಾಜಕಾರಣಿಗಳು ಕೇವಲ ಒಬ್ಬರ ಮೇಲೆ ಇನ್ನೊಬ್ಬರು ದೋಷಾರೋಪಣೆ ಮಾಡುತ್ತಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ಯಾರೂ ನಿಜವಾದ ಪರಿಹಾರ ನೀಡಲು ಸಿದ್ದರಿಲ್ಲ.

ಈ ಆರ್ಥಿಕ ತೀವ್ರತೆ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿ ಜನರಿಗೆ ಮೂಲಭೂತ ಸೌಲಭ್ಯಗಳು ದೊರಕುವದು ದುಸ್ತರವಾಗಿವೆ. ರಸ್ತೆ, ನೀರು, ತ್ಯಾಜ್ಯ ವಿಲೇವಾರಿ ಮುಂತಾದ ಸೇವೆಗಳು ಹದಗೆಟ್ಟಿವೆ. ಆದರೂ ರಾಜಕಾರಣಿಗಳು ತಮ್ಮ ಜವಾಬ್ದಾರಿಯನ್ನು ಅಧಿಕಾರಿಗಳ ಮೇಲೆ ಹಾಕುತ್ತಿದ್ದಾರೆ.
ಅದಕ್ಕಿಂತಲೂ ಆಘಾತಕರವೆಂದರೆ, ಬೆಳಗಾವಿಯಿಂದ ಪ್ರಮುಖ ಯೋಜನೆಗಳು ಹೊರಡೆಗೆ ಸ್ಥಳಾಂತರಗೊಳ್ಳುತ್ತಿದ್ದು, ಇದರಿಂದ ನಗರದ ಆರ್ಥಿಕತೆಯ ಬೆಳವಣಿಗೆ, ಉದ್ಯೋಗಾವಕಾಶಗಳ ಮೇಲೆ ದುಷ್ಪರಿಣಾಮ ಬಹುಮಟ್ಟಿಗೆ ತಟ್ಟಿದೆ.
ಅಭಿವೃದ್ದಿ ಕುಂಠಿತಕ್ಕೆ ದರ ಏರಿಕೆಯ ಮೊರೆ ಹೋಗುತ್ತಿರುವದು ಯಾವ ನ್ಯಾಯ? ಇದರ ಹೊರೆ ಜನರ ಮೇಲೆ ಬಿದ್ದಿದ್ದು, ವಿದ್ಯುತ್, ನೀರು, ಹಾಗೂ ಇತರೆ ನಗರ ಸೇವೆಗಳ ದರಗಳು ದಿಢೀರ್ ಏರಿಕೆ ಕಂಡಿವೆ. ಈ ದರ ಏರಿಕೆ ಜನರನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದ್ದು, ತಾತ್ಕಾಲಿಕ ಪರಿಹಾರವಿಲ್ಲದೆ ಜೀವನದುಸ್ತರವಾಗಿದೆ. ಆದರೂ, ರಾಜಕಾರಣಿಗಳು ಕೇವಲ ರಾಜಕೀಯ ಕಲಹಗಳಲ್ಲಿ ತೊಡಗಿದ್ದಾರೆ, ಆದರೆ ಪ್ರಾಮಾಣಿಕ ಸಮಾಲೋಚನೆ ಅಥವಾ ಪರಿಹಾರಗಳಿಗಾಗಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಇನ್ನು, ಬೆಳಗಾವಿಯಲ್ಲಿನ ಕೂಲಿ ಕಾರ್ಮಿಕರು ತಮ್ಮ ವೇತನ ಮತ್ತು ಶಾಶ್ವತ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಾತ್ಕಾಲಿಕ ಕೆಲಸದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಈಗ ಶಾಶ್ವತ ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ನಾಗರಿಕ ಸೇವೆಗಳ ಸ್ಥಗಿತಗೊಂಡಿರುವಾಗ, ಈ ಹೋರಾಟವು ಮತ್ತಷ್ಟು ಬಿಕ್ಕಟ್ಟು ಸೃಷ್ಟಿ ಮಾಡಿದೆ.
ಆದರೆ, ಕಾರ್ಮಿಕರ ಹಕ್ಕುಗಳನ್ನು ಮಾನ್ಯತೆ ನೀಡುವ ಬದಲು, ರಾಜಕಾರಣಿಗಳು ಕಾರ್ಮಿಕರನ್ನು ದುಷ್ಪರಿಣಾಮಕ್ಕೆ ಕಾರಣವೆಂದು ತಪ್ಪಿಸುವುದು ಮಾತ್ರ ಸುಲಭವಾಗಿದೆ.
ರಾಜಕಾರಣಿಗಳ ಹೊಣೆ ತಪ್ಪಿಸುವ ರಾಜಕೀಯ: ಜನರ ಅಭಿಪ್ರಾಯವೇನು?
ಬೆಳಗಾವಿಯ ರಾಜಕಾರಣಿಗಳು ಈಗಾಗಲೇ ಜನರನ್ನು ನಿರಾಸೆಗೊಳಿಸಿದ್ದಾರೆ. ಅವರು ಕೇವಲ ದೋಷಾರೋಪಣೆಯಲ್ಲಿ ತೊಡಗಿದ್ದರೂ, ಯಾವುದೇ ಉತ್ತಮ ಪರಿಹಾರವನ್ನು ಒದಗಿಸಲು ಮುಂದಾಗಿಲ್ಲ. ಈ ಎಲ್ಲ ರಾಜಕೀಯ ಆಟದಿಂದ ಆರ್ಥಿಕ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತಿದ್ದು, ಬಿಕ್ಕಟ್ಟಿನಿಂದ ಹೊರಬರುವ ಯಾವ ನಿರೀಕ್ಷೆಯೂ ಇಲ್ಲದಂತಾಗಿದೆ.
ಬೆಳಗಾವಿಯ ಜನರು ಈಗ ಜವಾಬ್ದಾರಿತನವನ್ನು ಕೇಳುತ್ತಾರೆ. ಈ ಸಂಕಷ್ಟವನ್ನು ನಿಭಾಯಿಸಲು ಸಮರ್ಥ ಆಡಳಿತವೇ ಬೇಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುವದು ಮಾತ್ರ ಸತ್ಯದ ಸಂಗತಿ.










