ಕುಡಿಯುವ ನೀರಿಗಾಗಿ ಜನರ ಪರದಾಟ

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ಏರ್ಪಟ್ಟಿದ್ದು ಸಕಾಲಕ್ಕೆ ಮಳೆಯಾಗದ ಕಾರಣ ಬರದ ಛಾಯೆ ಆವರಿಸಿದೆ.

promotions

ತಾಲೂಕಿನ ಅಡಹಳ್ಳಿ,ಕೋಹಳ್ಳಿ,ಕಕಮರಿ,ಐಗಳಿ ಸೇರಿದಂತೆ ಕೊಟ್ಟಲಗಿ ಭಾಗದಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಕಿಲೋಮಿಟರಗಟ್ಟಲೆ ಸಂಚರಿಸಿ ಕುಡಿಯುವ ನೀರು ತರಬೇಕಾಗಿದ್ದು ಮಹಿಳೆಯರು,ಪುರುಷರು ನಿತ್ಯದ ದುಡಿಮೆ ನಿಲ್ಲಿಸಿ ನೀರಿಗಾಗಿ ಅಲೆಯುವಂತಾಗಿದೆ.

promotions

ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಕೊಟ್ಟಿರುವ ರಾಜ್ಯ ಸರ್ಕಾರ ಕೂಡಲೇ ಅಥಣಿ ತಾಲೂಕಿನ ಕೆಲವು ಗ್ರಾಮಗಳನ್ನು ಬರಪೀಡಿತ ಗ್ರಾಮಗಳೆಂದು ಘೋಷಿಸಿ ಜನರಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಕೊಡುವ ಮೂಲಕ ಸ್ಪಂದಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

Read More Articles