ಬೆಳಗಾವಿಗೆ ಪ್ರಧಾನಿ ಮೋದಿ : ಹೈ ಲೆವೆಲ್ ಮೀಟಿಂಗ್ ನಡೆಸಿದ ಬಿಜೆಪಿ

ಬೆಳಗಾವಿ : ಫೆಬ್ರವರಿ 27ರಂದು 1ಗಂಟೆಗೆ ಪ್ರಧಾನಿ ಮೋದಿ ಬೆಳಗಾವಿಗೆ ಬರಲಿದ್ದು ಬೆಳಗಾವಿ ಬಿಜೆಪಿ ಬಿರುಸಿನ ತಯ್ಯಾರಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಪ್ರಧಾನಿ ಮೋದಿ 8 ಕಿ.ಮೀ  ರೋಡ್ ಶೋ  ನಡೆಸುತ್ತಾರೆ ಎಂದು ಹೇಳಿದ್ದಾರೆ.

promotions

ಬೆಳಗಾವಿ ರೈಲು ನಿಲ್ದಾಣವನ್ನು ಲೋಕಾರ್ಪಣೆ  ಮಾಡಲು ಆಗಮೀಸಲಿದ್ದಾರೆ ಎಂದು ಕಾರಜೋಳ ಹೇಳಿದ್ದಾರೆ.ಬೆಳಗಾವಿ ಲೊಂಡಾ  ರೈಲು ಮಾರ್ಗಕ್ಕೆ ರೂ.932/-ಕೋಟಿ ವೆಚ್ಚ ಮಾಡಲಾಗಿದ್ದು ಜಲ ಜೀವನಯೋಜನೆಗೆ ರೂ.1030/- ಕೋಟಿ ವೆಚ್ಚವಾಗಿದೆ ಎಂದು ಹೇಳಿದ್ದಾರೆ.

promotions

ಕಿಸಾನ ಸಮ್ಮಾನ್ ಯೋಜನೆಯಡಿ ದೇಶದ ಪ್ರತಿ ರೈತರಿಗೆ ಬೆಳಗಾವಿಯಿಂದಲೇ ಪ್ರಧಾನಿ ಹಣ  ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದಾರೆ ಮತ್ತು ಕರ್ನಾಟಕ ರಾಜ್ಯದಿಂದ ರೂ 6000ಕೊಡುತ್ತದೆ ಎಂದು ಹೇಳಿದ್ದಾರೆ.

ಜಲ ಜೀವನ  ಮಿಷನ್ ಯೋಜನೆಯಡಿ 7ಲಕ್ಷ ಜನರ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ನೀಡುವುದಾಗಿ ಹೇಳಿದ್ದಾರೆ,ಪ್ರತಿ ಹಳ್ಳಿಯಿಂದ ಜನ ಬರುತ್ತಾರೆ ಎಂದ ಕಾರಜೋಳ  

ರಾಜಹಂಸ ಘಡ ಉದ್ಘಾಟನೆಗೆ ಸಿ ಎಂ ಬರುವುದು ಪಕ್ಕಾ ಎಂದ ಕಾರಜೋಳ.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ವಕ್ತಾರರಾದ ಎಂ.ಬಿ ಝಿರಲಿ, ಸಂಸದರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ,ಶಾಸಕರಾದ ಅನೀಲ ಬಣಕೆ ,ಸಂಜಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Read More Articles