ಪ್ರಧಾನಿ‌ ಮೋದಿಗೆ ಮಾತೃ ವಿಯೋಗ

  • 14 Jan 2024 , 9:33 AM
  • Gujrat
  • 148

ಗುಜರಾತ :ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಶುಕ್ರವಾರ ಗುಜರಾತ್ ನ ಅಹ್ಮದಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

promotions

ಈ ಕುರಿತು ಟ್ವಿಟ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ‌ ಮೋದಿ ಅವರಿಗೆ ಮಾತೃ ವಿಯೋಗವಾಗಿದೆ. ಕಳೆದ ಎರಡ್ಮೂರು ದಿನದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೋದಿ ತಾಯಿ ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ಇಂದು‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

promotions

ಈ ದೇಶಕ್ಕೆ ಮಹಾನ್ ನಾಯಕನನ್ನು ನೀಡಿದಂತಹ ಭಾರತೀಯರೆಲ್ಲರಿಗೂ ಮಾತೃ ಸ್ವರೂಪಿಯಾದ ಶ್ರೀಮತಿ ಹೀರಾ ಬೆನ್ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನು ಕಳೆದುಕೊಂಡಿದೆ. ಭಾರತವನ್ನು ಮುನ್ನಡೆಸುವ ಸಮರ್ಥ ನಾಯಕನನ್ನು ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ ಆ ತಾಯಿಯ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಹಾಗೂ ಅವರ ನಿಧನದಿಂದ ಅವರ ಕುಟುಂಬಸ್ಥರಿಗೆ ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಗಿರುವ ದುಃಖದಲ್ಲಿ ನಾನು ಭಾಗಿ. ಈ ದುಃಖವನ್ನು ಸೈರಿಸುವ  ಶಕ್ತಿಯನ್ನು ದಯಾಘನನಾದ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

Read More Articles