ಪೃಥ್ವಿ ಸಿಂಗ್ ಹಲ್ಲೆ ಪ್ರಕರಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ : ಸಚಿವ ಪರಂ.

localview news

ಬೆಳಗಾವಿ :

ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಹಲ್ಲೆ ವಿಚಾರ ನನ್ನ ಗಮನಕ್ಕೆ ಬಂದಿದೆ. ಪೊಲೀಸರು ತನಿಖೆ ಮಾಡಿ ವರದಿ ನೀಡುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪೃಥ್ವಿ ಸಿಂಗ್ ಹೀನಲೆ ಏನು ಚಾಕು ಇರಿತ ಯಾಕೆ ಆಗಿದೆ. ಎನ್ನುವುದು ತನಿಖೆ ಮೂಲಕ ಗೊತ್ತಾಗಬೇಕಿದೆ. ಈ ಪ್ರಕರಣ ತನಿಖೆ ಮಾಡೋಣ. ಪೊಲೀಸರು ವರದಿ ನೀಡಿದ ಮೇಲೆ ಮುಂದಿನ ನಿರ್ಧಾರದ ಬಗ್ಗೆ ತಿಳಿಸುವೆ ಎಂದರು.

ಪೋಲಿಸರ ಮೇಲೆ ನಮಗೆ ನಂಬಿಕೆ ಇಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,ಹೇಳವವರು ಹೇಳುತ್ತಿರತ್ತಾರೆ ಯಾರನ್ನಾದರು ನಂಬಲೇ ಬೇಕಲ್ಲ. ಪೋಲಿಸರ ಮೇಲೆ ನಂಬಿಕೆ ಇಲ್ಲದಿದ್ದರೆ ಇವರು ಯಾರ ಮೇಲೆ ನಂಬಿಕೆ ಇಡುತ್ತಾರೆ. ಅವರಿಗೆ ಬೇಕಾದಾಗ ನಂಬಿಕೆ ಇರುತ್ತೆ, ಬೇಡವಾದಾಗ ನಂಬಿಕೆ ಇರಲ್ಲ. ಕಾನೂನು ಎಲ್ಲರಿಗೂ ನ್ಯಾಯವನ್ನ ಒದಗಿಸುವ ಕಾರ್ಯ ಮಾಡುತ್ತಿದೆ ಅವರ ಮೇಲೆ ನಂಬಿಕೆ ಇಡಬೇಕಾಗುತ್ತದೆ ಎಂದರು.

Latest Articles