ಬಿಜೆಪಿ ಮುಖಂಡನ ಹಲ್ಲೆ ಪ್ರಕರಣ ಪೊಲೀಸರು ತಿರುಚುವ ಪ್ರಯತ್ನ ಮಾಡಿದ್ದಾರೆ: ಅಶೋಕ
- shivaraj bandigi
- 14 Jan 2024 , 9:53 PM
- Belagavi
- 322
ಬೆಳಗಾವಿ:

ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ದೂರನ್ನು ತಿರುಚುವ ಪ್ರಯತ್ನ ಪೊಲೀಸ ಮಾಡಿದ್ದಾರೆ. ನಾನು ಕೊಟ್ಟ ದೂರನ್ನ ತಮಗೆಷ್ಟು ಬೇಕು ಅಷ್ಟು ತಗೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊನ್ನೆ ಸದನದಲ್ಲಿ ಏನ್ ಬೇಕಿದೆ ಅಷ್ಟು ಮಾತ್ರ ಗೃಹ ಸಚಿವರು ಓದಿದ್ದಾರೆ. ಈ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದರು.
ಅಶೋಕ ವಿಪಕ್ಷ ನಾಯಕ ಆಯ್ಕೆ ವಿರೋಧ ವಿಚಾರಕ್ಕೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಒಬ್ಬರು ನಾಯಕರ ಪರ, ವಿರೋಧ ಇರ್ತಾರೆ. ಒಬ್ಬರು ಆಯ್ಕೆಯಾದಗ ಹೀಗೆ ಹೇಳ್ತಾರೆ. ಹಾಗೇ ಕಾಂಗ್ರೆಸ್ ನಲ್ಲೂ ಡಿಕೆಶಿ ಸಿದ್ದರಾಮಯ್ಯ, ಪರಮೇಶ್ವರ ಸಿದ್ದರಾಮಯ್ಯ ಪರ ವಿರೋಧ ಇದೆ. ಇವೆಲ್ಲವೂ ರಾಜಕಾರಣದಲ್ಲಿ ಕಾಮನ್.
ಸಭಾತ್ಯಾಗ ವಿಚಾರದಲ್ಲಿ ಹೊಂದಾಣಿಕೆ ಯಿಲ್ಲ ಎಂಬ ಪ್ರಶ್ನೆಗೆ ನಿನ್ನೆ ಯತ್ನಾಳ ಅವರು ನನ್ನ ಹತ್ತಿರ ಬಂದು ಹೇಳಿದ್ರು. ಪ್ರತಿದಿನ ಧರಣಿ ಮಾಡಿದ್ರೆ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಆಗ್ತಿಲ್ಲ. ನೀವು ಸದನದ ಬಾವಿಗೆ ಇಳಿದ್ರೆ ಚರ್ಚೆ ಆಗಲ್ಲ. ಇಲ್ಲಿಗೆ ಬಂದು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಉತ್ತರ ಕರ್ನಾಟಕ ಬಗ್ಗೆ ನಾನು ಮಾಡಬೇಕು. ಹೀಗಾಗಿ ಧರಣಿ ಬೇಡಾ ಅಂತಾ ಯತ್ನಾಳ ಹೇಳಿದ್ರು. ನಾನು ಅದಕ್ಕೆ ಮುಂದಿರೋರನ್ನ ಕರೆದು ಚರ್ಚೆ ಮಾಡ್ದೆ. ಇದರಿಂದ ಹಿಂದಿರೋರು ಮುಂದಿರೋರರ ಮಧ್ಯೆ ಕಮ್ಯೂನಿಕೇಷನ್ಸ್ ಗ್ಯಾಪ್ ಆಗಿದೆ ಅಷ್ಟೇ ಎಂದ ಅಶೋಕ.










